ಬೆಂಗಳೂರು : ಜಾತಿ ಗಣತಿ ಸಮೀಕ್ಷೆ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿಗಳು ಕಳ್ಳಾಟ ನಡೆಸಿರುವುದು ಇದೀಗ ಬೆಳಕೆಗೆ ಬಂದಿದೆ. ಬೆಂಗಳೂರಿನಲ್ಲಿ ಕೆಲವು ಮನೆಗಳ ಮನೆಯ ಸದಸ್ಯರ ಮಾಹಿತಿ ಪಡೆಯದೆ ಹಾಗೂ ಖಾಲಿ ಇರುವ ಮನೆಗಳಿಗೂ ಕೂಡ ಬಿಬಿಎಂಪಿ ಸಿಬ್ಬಂದಿಗಳು ಕೇವಲ ಸ್ಟಿಕರ್ ಆಂಟಿಸಿ ಕಳ್ಳಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಮನೆಯ ಸದಸ್ಯರ ಮಾಹಿತಿ ಪಡೆಯದೇ ಬಿಬಿಎಂಪಿ ಸಿಬ್ಬಂದಿಗಳು ಸ್ಟಿಕರ್ ಆಂಟಿಸಿ ಕಳ್ಳಾಟ ನಡೆಸಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಎಡವಟ್ಟಿನ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮನ್ನು ಮಾತಾಡಿಸಿಲ್ಲ ಬರಿ ಸ್ಟಿಕರ್ ಹಾಕಿ ಹೋಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಅಲ್ಲದೇ ಕೆಲವು ಖಾಲಿ ಇರುವ ಮನೆಗಳಿಗೂ ಕೂಡ ಬಿಬಿಎಂಪಿ ಸಿಬ್ಬಂದಿಗಳು ಸ್ಟಿಕರ್ ಆಂಟಿಸಿದ್ದಾರೆ. ಮಾಹಿತಿ ಪಡೆಯದೆ ಹೀಗೆ ಮಾಡುವುದು ಸರಿಯಲ್ಲ ಅಂತ ಕಿಡಿ ಕಾರಿದ್ದಾರೆ. ಹಿತ ಸಾಮಾಜಿಕ ಜಾಲತಾಣದಲ್ಲೂ ಕೂಡ ಸ್ಟಿಕರ್ ಕಳ್ಳಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ.