ಬೆಂಗಳೂರು : ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯ ಒಂದರಲ್ಲಿ ಸುಮಾರು 25ಕ್ಕೂ ಹೆಚ್ಚು ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ ಅಲ್ಲದೆ ವಿವಿಧ ಜಿಲ್ಲೆಗಳಲ್ಲಿ ಕೂಡ ಹಲವರು ಹಾರ್ಟ್ ಅಟ್ಯಾಕ್ಕೆ ಬಲಿಯಾಗಿದ್ದಾರೆ. ಆದರೆ ಕರಿಯಾಗತಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂದು ಹೇಳಲಾಗುತ್ತಿದ್ದು ಇದೀಗ ಐಸಿಎಂಆರ್ ಹಾಗೂ ಏಮ್ಸ್ ಸಂಶೋಧನಾ ಅಧ್ಯಯನದಲ್ಲಿ ಕೋವಿಡ್ ಲಸಿಕೆಗೂ ಹೃದಯಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿ ಬಂದಿದೆ.
ಹೌದು ಕೋವಿಡ್ ಲಸಿಕೆಗೂ ಹೃದಯಘಾತಕ್ಕೂ ಯಾವುದೇ ಸಂಬಂಧವಿಲ್ಲ. ಕೋವಿಡ್ ವ್ಯಾಕ್ಸಿನಿಂದ ಹಾರ್ಟ್ ಅಟ್ಯಾಕ್ ಆಗುವುದಿಲ್ಲ ICMR, AIIMS ಕೋವಿಡ್ ಲಸಿಕೆಯಿಂದ ಹೃದಯಘಾತ ಅನ್ನುವುದು ಸುಳ್ಳು. ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂಬುದಾಗಿ ತಿಳಿದುಬಂದಿದೆ. ಮೊದಲೇ ಆರೋಗ್ಯದಲ್ಲಿ ತೊಂದರೆ ಇದ್ದರೆ ಮಾತ್ರ ಹೃದಯಘಾತ ಸಂಭವಿಸುತ್ತದೆ. ಕೋರೊನಾ ಲಸಿಕೆಯಿಂದ ಹೃದಯಾಘಾತ ಆಗುವುದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆಯಿಂದ ಸಂಶೋಧನಾ ವರದಿಯಲ್ಲಿ ತಿಳಿದು ಬಂದಿದೆ.