ಬೆಂಗಳೂರು : ಕಳೆದ ಒಂದು ತಿಂಗಳಿನಿಂದ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೃದಯಾಘಾತದಿಂದ ಅನೇಕರು ಸಾವನ್ನಪ್ಪಿದ್ದಾರೆ. ಇದೀಗ ಎದೆ ನೋವು ಎಂದು ಆಸ್ಪತ್ರೆ ಬಂದವನಿಗೆ ಹೃದಯಸ್ತಂಭನವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಆಸ್ಪತ್ರೆಯ ಬೆಡ್ ಮೇಲೆ ಹೃದಯಸ್ತಂಭನದಿಂದ ಬ್ರೈನ್ ಡೆಡ್ ಆಗಿ ವ್ಯಕ್ತಿ ಸಾವನಪ್ಪಿದ್ದಾರೆ.
ಮೃತರನ್ನು ಹೊಸಕೋಟೆಯ ಕೋನಪ್ಪ (52) ಎಂದು ತಿಳಿದುಬಂದಿದೆ. ಬ್ರೈನ್ ಡೆಡ್ ಆಗಿ ಸಾವನ್ನಪ್ಪಿರುವ ವ್ಯಕ್ತಿಯನ್ನು ತಿಳಿದು ಬಂದಿದೆ ಆಸ್ಪತ್ರೆಗೆ ಕೊನಪ್ಪ ಎದೆ ನೋವು ಎಂದು ಬಂದಿದ್ದರು ಚಿಕಿತ್ಸೆಗಂದು ಅದೇನೋ ಅಂತ ನಡೆದುಕೊಂಡೆ ಕೊನಪ್ಪ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಈ ವೇಳೆ ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ, ಅವರಿಗೆ ಹೃದಯ ಸ್ತಂಭನವಾಗಿದೆ. ತಕ್ಷಣ ಚಿಕಿತ್ಸೆಗೆಂದು ಬೇರೆ ಆಸ್ಪತ್ರೆಗೆ ರವಾನಿಸುವಾಗ ಬ್ರೈನ್ ಆಗಿ ಕೊನಪ್ಪ ಸಾವನ್ನಪ್ಪಿದ್ದಾರೆ.