ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆ ಜಾಲಕ್ಕೆ ಪೂರೈಸುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧುತ ಆರೋಪಿಗಳಿಂದ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಛತ್ರದ ಹೊಸಹಳ್ಳಿ ಗ್ರಾಮದ ಎನ್.ಲಕ್ಷ್ಮೀಶ್ ಅಲಿಯಾಸ್ ರಾಜೇಶ್, ಕನಕಪುರ ರಸ್ತೆಯ ತಾತಗುಣಿಯ ಅಗರದ ನಿವಾಸಿ ಪ್ರಕಾಶ್, ಜೆ.ಪಿ.ನಗರ 7ನೇ ಹಂತದ ಸಂತೃಪ್ತಿ ನಗರದ ಸುನೀಲ್ ಕುಮಾರ್ ಹಾಗೂ ರಾಮನಗರದ ಅರ್ಚಕರಹಳ್ಳಿಯ ಪುಟ್ಟಸ್ವಾಮಯ್ಯ ಎಂದು ತಿಳಿದುಬಂದಿದೆ.ಆರೋಪಿಗಳಿಂದ 1 ಲ್ಯಾಪ್‌ಟಾಪ್, 4 ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ನ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ.