ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಶಾಸಕರು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿದ್ದಾರೆ ಅದರಲ್ಲೂ ಕಲಬುರ್ಗಿ ಜಿಲ್ಲೆಯ ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರ ಕುರಿತು ಸ್ವಪಕ್ಷದ ವಿರುದ್ಧವೇ ಆಕ್ರೋಶ ಹೊರಹಾಕಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಿ ಆರ್ ಪಾಟೀಲ್ ದೂರು ನೀಡಿದ್ರಾ? ಎನ್ನುವ ಸುದ್ದಿ ಹರಿದಾಡುತ್ತಿದ್ದು ಈ ಕುರಿತು ಬಿಆರ್ ಪಾಟೀಲ್ ಮಾತನಾಡಿರುವ ಮತ್ತೊಂದು ವಿಡಿಯೋ ವೈರಲಾಗಿದೆ.
ಹೌದು ಸಿದ್ದರಾಮಯ್ಯ ವಿರುದ್ಧವೇ ಶಾಸಕ ಬಿಆರ್ ಪಾಟೀಲ್ ದೂರು ನೀಡಿದ್ರಾ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಬಿ ಆರ್ ಪಾಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಕೆ.ಆರ್ ಪೇಟೆಗೆ ಬಂದಿದ್ದಾಗ ಶಾಸಕ ಬಿ.ಆರ್ ಪಾಟೀಲ್ ಅವರು l ಯಾರದ್ದೋ ಜೊತೆಗೆ ಫೋನಲ್ಲಿ ಮಾತನಾಡುವಾಗ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿಗೆ ಮೊದಲು ಭೇಟಿ ಮಾಡಿಸಿದ್ದೆ ನಾನು. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಎಂದು ಹೇಳಿದ್ದಾರೆ.
ಮುಂದುವರೆದು ಸಿದ್ದರಾಮಯ್ಯನ ಗ್ರಹಚಾರ ಚೆನ್ನಾಗಿತ್ತು ಅದಕ್ಕೆ ಆತ ಮುಖ್ಯಮಂತ್ರಿ ಆದ. ಆದರೆ ನನ್ನ ಗ್ರಹಚಾರ ಚೆನ್ನಾಗಿಲ್ಲ ನನಗೆ ಯಾವ ಗಾಡೂ ಇಲ್ಲ, ಯಾವ ಫಾದರು ಇಲ್ಲ ಹಾಗಾಗಿ ಸುರ್ಜೆವಾಲಾ ಭೇಟಿ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ನನ್ನ ಮಾತನ್ನು ಗಂಭೀರವಾಗಿ ಆಲಿಸಿದ್ದಾರೆ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ನೋಡೋಣ ಎಂದು ಮಾತನಾಡಿದ್ದಾರೆ ಎನ್ನುವ ವೈರಲ್ ಆಗಿದೆ.