ತುಮಕೂರು : ತುಮಕೂರಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಬಂಡೆ ಡ್ರಿಲ್ಲಿಂಗ್ ವೇಳೆ ಕೆಳಗೆ ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಬಳಿಯ ಜಲ್ಲಿ ಕ್ರಶರ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಬಂಡೆ ಡ್ರಿಲ್ ಮಾಡುತ್ತಿದ್ದ ಕಾರ್ಮಿಕ ದಾಲ್ಶನ್ (26) ಸಾವನಪ್ಪಿದ್ದಾರೆ. ಘಟನೆಯಲ್ಲಿ ಅಶೋಕ್ ಮತ್ತು ಸೌಧರ್ ಸಂಗಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣ ತುಮಕೂರು ಜಿಲ್ಲೆಯ ಸರ್ಕಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಾರ್ಮಿಕರು ಮೂಲತಃ ಮಧ್ಯಪ್ರದೇಶದ ಆಲುಪುರ ಜಿಲ್ಲೆಯ ಎಂದು ತಿಳಿದು ಬಂದಿದೆ.
ಇಂದು ಮೂವರು ಕಾರ್ಮಿಕರು ಕ್ರಷರ್ ನಲ್ಲಿ ಬಂಡೆ ಡ್ರಿಲ್ ಮಾಡುತ್ತಿದ್ದಾಗ ಬ್ಲಾಸ್ಟ್ ಮಾಡಲು ಬಂಡೆ ಮೇಲೆ ನಿಂತು ಡ್ರಿಲ್ಲಿಂಗ್ ಮಾಡುತ್ತಿದ್ದರು. ಈ ವೇಳೆ ಬಂಡೆ ಬಿರುಕು ಬಿಟ್ಟು ಸುಮಾರು 50 ಆಳಕ್ಕೆ ಬಿದ್ದು ದಾಲ್ಶನ್ ಸಾವನ್ನಪ್ಪಿದ್ದಾರೆ. ಗ್ಯಾಸ್ ಬಾಬು ಒಡೆತನಕ್ಕೆ ಸೇರಿದ ಜಲ್ಲಿ ಕ್ರಷರ್ ನಲ್ಲಿ ಈ ಒಂದು ಘಟನೆ ನಡೆದಿದೆ.