ಭಟ್ಕಳ: ರಾಜ್ಯದಲ್ಲಿ ಗೋವುಗಳ ಮೇಲಿನ ರಾಕ್ಷಿಸಿ ಕೃತ್ಯ ಮುಂದುವರೆದಿದ್ದು, ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಪಂ ವ್ಯಾಪ್ತಿಯ ನೀರಗದ್ದೆ ಗುಡ್ಡದ ಮೇಲೆ ಭಾನುವಾರ ತಡರಾತ್ರಿ ಗೋವನ್ನು ಹತ್ಯೆ ಮಾಡಿ ಅದರ ತಲೆ ಕಡಿದು ವಿಕೃತಿ ಮೆರೆಯಲಾಗಿದೆ.
ದುಷ್ಕರ್ಮಿಗಳು ಕದ್ದು ಹಿಂಸಾತ್ಮಕವಾಗಿ ವಧೆ ಮಾಡಿದ್ದಾರೆ. ಕತ್ತರಿಸಿದ ಗೋವಿನ ತಲೆಯನ್ನು ಮಾರಕಲ್ಲ ಗದ್ದೆಯ ಖಾಲಿ ಜಮೀನಿನಲ್ಲಿ ಎಸೆಯಲಾಗಿದೆ.
ಘಟನೆ ಖಂಡಿಸಿ ಹಿಂದು ಸಂಘಟನೆ, ಬಿಜೆಪಿ ಮುಖಂಡರು ಡಿವೈಎಸ್ಪಿ ಕಚೇರಿಗೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮೀಣ ಠಾಣೆ ಪಿಎಸ್ಐ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.