Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ವಿಶಾ ಶರ್ಮಾ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್! ಸಾವಿಗೂ ಕೆಲ ಗಂಟೆ ಮುನ್ನ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ಮಾಡೆಲ್; ಸಿಸಿಟಿವಿಯಲ್ಲಿ ರಹಸ್ಯ ಬಯಲು!

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕ ಹೈಕೋರ್ಟ್ ನಲ್ಲಿ ಕನ್ನಡದಲ್ಲೇ ವಿಚಾರಣೆ ನಡೆಸಲು ಪುರುಷೋತ್ತಮ ಬಿಳಿಮಲೆ ಆಗ್ರಹ
KARNATAKA

ಕರ್ನಾಟಕ ಹೈಕೋರ್ಟ್ ನಲ್ಲಿ ಕನ್ನಡದಲ್ಲೇ ವಿಚಾರಣೆ ನಡೆಸಲು ಪುರುಷೋತ್ತಮ ಬಿಳಿಮಲೆ ಆಗ್ರಹ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕೆಲವೇ ಗೌರವಾನ್ವಿತ ನ್ಯಾಯಾಧೀಶರುಗಳ ವಿಶೇಷ ಆಸಕ್ತಿಯಿಂದ ಕನ್ನಡ ಭಾಷೆ ನ್ಯಾಯಾಲಯ ವ್ಯವಸ್ಥೆಯಲ್ಲಿ ಉಸಿರಾಡುತ್ತಿದ್ದು, ಕಕ್ಷಿದಾರರು, ನ್ಯಾಯವಾದಿಗಳು ಕನ್ನಡದವರೇ ಆಗಿದ್ದರೂ ಸಹ ವಿಚಾರಣೆಗಳು, ತೀರ್ಪುಗಳು ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಇರುವುದು ವ್ಯವಸ್ಥೆಯ ಅಣಕವಾಗಿದ್ದು, ರಾಜ್ಯ ಉಚ್ಚ ನ್ಯಾಯಾಲಯವು ಕನ್ನಡದಲ್ಲಿ ವಿಚಾರಣ ವ್ಯವಸ್ಥೆಯನ್ನು ಜಾರಿಯಲ್ಲಿಡುವಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಕುರಿತಂತೆ ರಾಜ್ಯ ಉಚ್ಚ ನ್ಯಾಯಾಲಯ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಕನ್ನಡದಲ್ಲಿ ನ್ಯಾಯದಾನವನ್ನು ಅಪೇಕ್ಷಿಸುವ ಅಸಂಖ್ಯ ಕನ್ನಡಿಗರ ವೇದನೆಯನ್ನು ಶಮನಗೊಳಿಸಬೇಕಾದಲ್ಲಿ ಮಾನ್ಯ ನ್ಯಾಯಾಲಯವು ಹೆಚ್ಚಿನ ಮುತುವರ್ಜಿಯನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ. ಕನಿಷ್ಟ ಪಕ್ಷ ಕನ್ನಡದಲ್ಲಿ ಪ್ರಕರಣವನ್ನು ದಾಖಲಿಸಲು ಅನುವು ಮಾಡಿಕೊಟ್ಟಲ್ಲಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ ಜನ ಸಾಮಾನ್ಯರಲ್ಲಿ ಗೌರವ ಹೆಚ್ಚುತ್ತದೆ. ವಿಚಾರಣೆಗಳು, ತೀರ್ಪುಗಳು ಕನ್ನಡ ಭಾಷೆಯಲ್ಲಿ ಬರುವಂತಾದಲ್ಲಿ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಹೊರನಾಡು ಗಡಿನಾಡಿನ ಕನ್ನಡಿಗರ ಪರವಾದ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸಿ

ಹೊರನಾಡು ಗಡಿನಾಡಿನ ಕನ್ನಡಿಗರನ್ನು ಕರ್ನಾಟಕ ಸರ್ಕಾರವು ನಡೆಸಿಕೊಳ್ಳುತ್ತಿರುವ ರೀತಿ ಸಮಂಜಸವಾಗಿಲ್ಲವೆನ್ನುವ ಅಭಿಪ್ರಾಯವು ದಿನೇ ದಿನೇ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮುದಾಯದ ಹಿತವನ್ನು ಕಾಯುವಲ್ಲಿ ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಬದ್ಧತೆಯಿಂದ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಬೇಕೆಂದು ಬಿಳಿಮಲೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರವು ಭಾರತದ ಯಾವುದೇ ಪ್ರದೇಶದಲ್ಲಿ 1 ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ, ಶಿಕ್ಷಣದಲ್ಲಿ ಶೇ.5ರ ಸಮತಳ ಮೀಸಲಾತಿಯನ್ನು ಕಲ್ಪಿಸಿದ್ದರೂ ಈ ಆದೇಶಗಳ ಸಮರ್ಪಕ ಅನುಷ್ಠಾನವನ್ನು ರಾಜ್ಯ ಸರ್ಕಾರದ ಇಲಾಖೆಗಳು ಮಾಡುತ್ತಿಲ್ಲ. ಸಂಬಂಧಪಟ್ಟ ರಾಜ್ಯಗಳು ನೀಡುವ ಗಡಿನಾಡು, ಹೊರನಾಡಿನ ವಿದ್ಯಾರ್ಥಿಗಳ ಜಾತಿ, ಆದಾಯ ಪ್ರಮಾಣ ಪತ್ರಗಳಿಗೆ, ವಿಕಲಚೇತನ ಪ್ರಮಾಣ ಪತ್ರಗಳಿಗೆ ಯಾವುದೇ ಮನ್ನಣೆಯನ್ನು ನೀಡುತ್ತಿಲ್ಲ. ಇದು ಹೊರನಾಡು, ಗಡಿನಾಡಿನ ಕನ್ನಡಿಗರು ತಾವು ಹೊಂದಿರುವ ಕರ್ನಾಟಕದ ಬಗೆಗಿನ ಅಭಿಮಾನವನ್ನೇ ಸಂದೇಹಿಸುವ, ಅವರ ಆತ್ಮವಿಶ್ವಾಸವನ್ನು ಕಸಿಯುವ ಪ್ರಯತ್ನವಾಗಲಿದೆ ಎಂದಿದ್ದಾರೆ.

BREAKING: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರ | Shubhanshu Shukla

ಉದ್ಯೋಗಿಗಳೇ ಗಮನಿಸಿ : ಪ್ರತಿ ತಿಂಗಳು ನಿಮ್ಮ ಸಂಬಳದಿಂದ `PF’ ಕಡಿತಗೊಂಡರೆ ಸಿಗಲಿವೆ ಈ 7 ಪ್ರಯೋಜನಗಳು.!

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

2 Mins Read

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

2 Mins Read

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

3 Mins Read
Recent News

ಟ್ವಿಶಾ ಶರ್ಮಾ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್! ಸಾವಿಗೂ ಕೆಲ ಗಂಟೆ ಮುನ್ನ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ಮಾಡೆಲ್; ಸಿಸಿಟಿವಿಯಲ್ಲಿ ರಹಸ್ಯ ಬಯಲು!

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

ವಿಶ್ವಕ್ಕೇ ಆವರಿಸಿದ ‘ಮಾನಸಿಕ ಜ್ವರ’! 1990 ರಿಂದೀಚೆಗೆ ದುಪ್ಪಟ್ಟಾದ ಕೇಸ್; ಬರೋಬ್ಬರಿ 120 ಕೋಟಿ ಜನರಿಗೆ ಮಾನಸಿಕ ಕಾಯಿಲೆ: WHO ಕಳವಳಕಾರಿ ವರದಿ

State News
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `KPSC’ಯಿಂದ 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

By kannadanewsnow57 KARNATAKA 2 Mins Read

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.…

ಹಸಿ ಮೀನು Vs ಒಣ ಮೀನು: ಆರೋಗ್ಯಕ್ಕೆ ಯಾವುದು ಬೆಸ್ಟ್? ತಿಳಿಯಿರಿ

BREAKING: ಎಬೋಲಾ ವೈರಸ್ ಭೀತಿ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ | Ebola virus

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.