Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​12 ವರ್ಷಗಳ ಆಡಳಿತ: ಭಾರತದ ಸುದೀರ್ಘಾವಧಿಯ ಪ್ರಧಾನಿಯಾಗಿ ನರೇಂದ್ರ ಮೋದಿ ದಾಖಲೆ

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

​ಮುಂದಿನ ವಾರ ಫ್ರಾನ್ಸ್‌ನಲ್ಲಿ ಜಿ-7 ಶೃಂಗಸಭೆ: ಮೋದಿ-ಟ್ರಂಪ್ ಭೇಟಿಯ ಸಾಧ್ಯತೆ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ
KARNATAKA

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ವಸತಿ ಹಗರಣ ಬೃಹತ್ ಸದ್ದು ಮಾಡುತ್ತಿದೆ. ಈ ಹಗರಣದಲ್ಲಿ ವಸತಿ ಸಚಿವರ ರಾಜೀನಾಮೆಗೆ ಸ್ವಪಕ್ಷೀಯ ಶಾಸಕರಿಂದಲೇ ಆಗ್ರಹ ಕೇಳಿ ಬಂದಿದೆ. ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ವಸತಿ ಹಗರಣದಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಇಂದು ಶಿವಮೊಗ್ಗದ ಸಾಗರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೇಶದಲ್ಲಿ ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ. ಸುಮಾರು 160 ರಿಂದ 180 ಒಂದು ಚೀಲಕ್ಕೆ ಜಾಸ್ತಿ ಮಾಡಿದ್ದಾರೆ. ಇದರಿಂದ ದೇಶದ ಸಣ್ಣ ರೈತರಿಗೆ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಹಾಲಿನ ದರ ಒಂದು ರೂಪಾಯಿ, ಎರಡು ರೂಪಾಯಿ ಮಾಡಿದಾಗ ಬೀದಿಗೆ ಬಂದು ಬಿಜೆಪಿಯ ನಾಯಕರು ಬಾಯಿ ಬಡಿದುಕೊಂಡರು. ಈ ದೇಶದ ರೈತರ ಮೇಲೆ ರಸಗೊಬ್ಬರದ ಬಾರ ಹೇರಿದ್ದಾರಲ್ಲ. ಇದರ ಬಗ್ಗೆ ಯಾರಾದರೂ ಚಕಾರ ಎತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಈ ದೇಶದ ರೈತರ ಪರ ಅಂತ ಮೋದಿ ಹೇಳುತ್ತಿದ್ದಾರೆ. ರಸಗೊಬ್ಬರ ದರ ಏರಿಕೆ ಮಾಡಿದ್ದಾ ಮೋದಿಜೀ ಅವರ ಕೊಡುಗೆ? ನಿಮಗೆ ನಾಚಿಕೆ ಆಗಬೇಕು ಕರ್ನಾಟಕದ ಬಿಜೆಪಿ ನಾಯಕರಿಗೆ. ನೀವು ಸಣ್ಣಪುಟ್ಟದ್ದಕ್ಕೆಲ್ಲ ರೇಟ್ ಜಾಸ್ತಿಯಾದಾಗ ಬಾರಿ ಮಾಡಿ ಬಿಟ್ರಿ. ಬಾರಿ ಮಾಡಿ ಬಿಟ್ರಿ ಅಂತ ಹೋರಾಟ ಮಾಡಿದವರು ಇವತ್ತು ಒಬ್ಬರು ಸಹ ಚಕಾರ ಎತ್ತುತ್ತಿಲ್ಲ. ನಿಜವಾಗಲೂ ಇದು ಬಹಳ ಬೇಸರದ ಸಂಗತಿ. ಇದನ್ನ ಈ ದೇಶದ ಜನ ಖಂಡನೆ ಮಾಡ್ತಾ ಇದ್ದಾರೆ ಇವತ್ತು ಎಂದರು.

ಬಿಜೆಪಿಯ ಕೆಲವು ಮುಖಂಡರು ರಾಷ್ಟ್ರಧ್ವಜವನ್ನು ಕೇಸರೀಕರಣ ಮಾಡಬೇಕು ಅಂತ ಹೊರಟಿದ್ದಾರಲ್ಲ ಇದು ಯಾವತರ ದೇಶರದ ಪರಿಸ್ಥಿತಿ ಅಂತ ಅರ್ಥವಾಗುತ್ತಿಲ್ಲ. ರಾಷ್ಟ್ರಧ್ವಜವನ್ನ ಕೇಸರೀಕರಣ ಮಾಡಬೇಕು ಅಂತ ಅಂದ್ರೇ ಇವರ ಧ್ಯೇಯ ಉದ್ದೇಶವೇನಿದೆ? ಇವರೆಲ್ಲ ರಾಷ್ಟ್ರದ್ರೋಹಿಗಳು. ಇಂತವರನ್ನೆಲ್ಲ ನೇಣಿಗೆ ಹಾಕಬೇಕು. ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಚೇಂಜ್ ಮಾಡಬೇಕು ಅಂತ ಹೇಳ್ತಾರೋ ಅಂತವರನ್ನು ನೇಣುಗಂಬಕ್ಕೆ ಏರಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು.

ದೇಶದ ಪ್ರಧಾನಿಯನ್ನು ವಿಶ್ವಗುರು ಅಂತ ಬಿಂಬಿಸುತ್ತಿದ್ದಾರೆ. ಆದರೇ ಇವರು ಹೊರದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಇರಾನ್, ಇಸ್ರೇಲ್ ನಲ್ಲಿ ಯುದ್ಧ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಇದು ಬೇಸರದ ಸಂಗತಿಯಾಗಿದೆ. ದೇಶದ ಜನರು ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು.

ನಮ್ಮ ರೈತರ ಪರವಾಗಿ ಪ್ರಧಾನಿ ಧ್ವನಿಯೆತ್ತಬೇಕು. ವರ್ಷಕ್ಕೋ ಆರು ತಿಂಗಳಿಗೋ ಕೊಡುವಂತ 6000 ಏನುಕ್ಕೆ ಬರುತ್ತದೆ? ಹಾಲಿನ ದರ ಹೆಚ್ಚಾದಾಗ ಬೊಬ್ಬೆ ಹೊಡೆದ ನೀವು, ಇವತ್ತು ಏನಾಗಿದೆ. ನಿಮ್ಮ ನಾಲಿಗೆ ಒಣಗಿ ಹೋಗಿದ್ಯಾ? ವಿಜಯೇಂದ್ರಗೆ ಇವತ್ತು ಧ್ವನಿ ಇಲ್ವ ಎಂದು ಪ್ರಶ್ನಿಸಿದರು.

ವಸತಿ ಹಗರಣದ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಹಿರಿಯ ಸದಸ್ಯರು ಆಪಾದನೆ ಮಾಡಿದ್ದಾರೆ. ತಪ್ಪಿತಸ್ಥ ಮಂತ್ರಿ ರಾಜೀನಾಮೆ ಕೊಡೋದು ಒಳ್ಳೇದು. ಬೇರೆ ಬೇರೆ ಹಗರಣಗಳಲ್ಲಿ ರಾಜೀನಾಮೆ ಕೊಟ್ಟು ಆನಂತ್ರ ತನಿಖೆಯಲ್ಲಿ ಸಾಭೀತಾಗದ ವೇಳೆಯಲ್ಲಿ ಒಳಗೆ ಬಂದಿದ್ದಾರೆ. ಹಾಗೆ ಈ ವಸತಿ ಹಗರಣದಲ್ಲಿ ರಾಜೀನಾಮೆ ನೀಡಬೇಕು. ಹಗರಣ ನಡೆದಿಲ್ಲ ಎಂದ್ರೇ ತನಿಖೆಯ ನಂತ್ರ ಒಳಗೆ ಬರಲಿ ಅಂತ ತಿಳಿಸಿದರು.

ವರದಿ; ವಸಂತ ಬಿ ಈಶ್ವರಗೆರೆ..,

BREAKING : 2 ದಿನದಲ್ಲಿ ರಾಜೀನಾಮೆ ಕೊಡಬಹುದು: ಶಾಸಕ ರಾಜು ಕಾಗೆ ಎಚ್ಚರಿಕೆಗೆ CM ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

Share. Facebook Twitter LinkedIn WhatsApp Email

Related Posts

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

1 Min Read

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

4 Mins Read

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

1 Min Read
Recent News

​12 ವರ್ಷಗಳ ಆಡಳಿತ: ಭಾರತದ ಸುದೀರ್ಘಾವಧಿಯ ಪ್ರಧಾನಿಯಾಗಿ ನರೇಂದ್ರ ಮೋದಿ ದಾಖಲೆ

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

​ಮುಂದಿನ ವಾರ ಫ್ರಾನ್ಸ್‌ನಲ್ಲಿ ಜಿ-7 ಶೃಂಗಸಭೆ: ಮೋದಿ-ಟ್ರಂಪ್ ಭೇಟಿಯ ಸಾಧ್ಯತೆ?

​ಪುಣೆ ವಿಚ್ಛೇದನ ಪ್ರಕರಣ: 1.41 ಲಕ್ಷ ರೂ. ಗಳಿಸುವ ಪತ್ನಿಗೆ 1.35 ಲಕ್ಷ ರೂ. ಜೀವನಾಂಶ! ನ್ಯಾಯಾಲಯದ ಆದೇಶ ವೈರಲ್

State News
KARNATAKA

Rain Alert : ರಾಜ್ಯಾದ್ಯಂತ ಮುಂದಿನ 3 ದಿನ `ನೈಋತ್ಯ ಮುಂಗಾರು’ ಆರ್ಭಟ: ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳ ಆರ್ಭಟ ಜೋರಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು…

BREAKING: ಸಿಎಂ ಡಿ.ಕೆ ಶಿವಕುಮಾರ್ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ: ಯಾರಿಗೆ ಯಾವ ಜವಾಬ್ದಾರಿ? ಇಲ್ಲಿದೆ ಮಾಹಿತಿ

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ಗ್ರಾಹಕರ ಗಮನಕ್ಕೆ : ಇಂದಿನಿಂದ ರಾಜ್ಯದ 20 ಪಟ್ಟಣಗಳಲ್ಲಿ ಬಿಲ್‌ ಪಾವತಿ ಸೇರಿ ಬೆಸ್ಕಾಂನ ಹಲವು ಆನ್‌ಲೈನ್ ಸೇವೆ 21 ದಿನ ಬಂದ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.