ಮಂಡ್ಯ: ಜಿಲ್ಲೆಯ ಜೀವನಾಡಿ ಕೆ ಆರ್ ಎಸ್ ಡ್ಯಾಂ ಹೊಸ ದಾಖಲೆ ಬರೆಯೋದಕ್ಕೆ ಸಿದ್ಧಗೊಂಡಿದೆ. ಕೆ ಆರ್ ಎಸ್ ಡ್ಯಾಂನಲ್ಲಿ ಈಗ 119.40 ಅಡಿ ಇದ್ದು, ಸಂಪೂರ್ಣ ಭರ್ತಿಗೆ ಕೇವಲ 5 ಅಡಿ ಮಾತ್ರವೇ ಬಾಕಿ ಇದೆ.
ಹಳೇ ಮೈಸೂರು ಭಾಗದ ರೈತರ ಜೀವನಾಡಿಯೇ ಕೆ ಆರ್ ಎಸ್ ಡ್ಯಾಂ ಆಗಿದೆ. ಈಗಾಗಲೇ 119.40 ಅಡಿ ನೀರು ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಅಣೆಕಟ್ಟು ಸಂಪೂರ್ಣ ಭರ್ತಿಯತ್ತ ಸಾಗುತ್ತಿರುವುದು ರೈತರ ಮೊಗದಲ್ಲಿ ಸಂತಸವನ್ನು ಹೆಚ್ಚಿಸಿದೆ.
ಅಂದಹಾಗೇ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ನಲ್ಲಿಯೇ ಇಷ್ಟು ಪ್ರಮಾಣದಲ್ಲಿ ಕೆ ಆರ್ ಎಸ್ ಡ್ಯಾಂನಲ್ಲಿ ನೀರು ಸಂಗ್ರಹಣೆ ಆಗಿದೆ. ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಿನಲ್ಲಿ ಕೆ ಆರ್ ಎಸ್ ಡ್ಯಾಂ ಭರ್ತಿಯಾಗುತ್ತಿತ್ತು. ಆದರೇ ಈ ಬಾರಿ ಇಷ್ಟೊಂದು ನೀರು ಸಂಗ್ರಹವಾಗುವ ಮೂಲಕ ಹೊಸ ಇತಿಹಾಸ ಸೃಷ್ಠಿಸಿದೆ.
BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!