ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ನನಗೆ ಅಧಿಕಾರ ಕೊಡಿ ಎಂಬ ಹೇಳಿಕೆ ವಿಚಾರವಾಗಿ ಅವರು ಹೇಳಲಿ ಬಿಡಿ ಅವರಿಗೆ ಯಾರು ಬೇಡ ಅಂದೋರು? 2028ಕ್ಕೆ ಪ್ರಧಾನಮಂತ್ರಿಯಾಗಲಿ ಮುಖ್ಯಮಂತ್ರಿ ಆಗಲಿ, ಬೇಡ ಅಂದೋರ್ಯಾರು? ಆದರೆ ಹೈಕಮಾಂಡ್ ಎಲ್ಲವನ್ನೂ ಅಂತಿಮವಾಗಿ ನಿರ್ಧಾರ ಮಾಡುತ್ತದೆ. ಸಾಮೂಹಿಕ ನಾಯಕತ್ವದ ಮೇಲೆ ಅಧಿಕಾರಕ್ಕೆ ಬರುವುದು ಎಂದು ಸಂಪುಟ ಸಭೆಯ ನಂತರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.
ಇನ್ನು ಬಳ್ಳಾರಿ ಹಾಲು ಒಕ್ಕೂಟದ ಚುನಾವಣೆ ವಿಳಂಬ ವಿಚಾರವಾಗಿ ಭೀಮ ನಾಯಕ್ ಆರೋಪಕ್ಕೆ ಸಚಿವ ಜಯನ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಆ ರೀತಿ ತಿಳಿದುಕೊಂಡಿದ್ದರೆ ನಾನೇನು ಮಾಡೋಕೆ ಆಗಲ್ಲ. ಸಿಎಂ ಸಿದ್ದರಾಮಯ್ಯಗೆ ದೂರು ಕೊಟ್ಟ ಮೇಲೆ ಅವರೇ ನಿರ್ಧಾರ ಮಾಡುತ್ತಾರೆ. ನಾವು ಕೋರ್ಟ್ ಆದೇಶದ ವಿರುದ್ಧ ಹೋಗೋಕಾಗಲ್ಲ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗೂ ಸಹ ಇಲ್ಲ. ಈ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡಲ್ಲ ಎಂದು ತಿಳಿಸಿದರು.