ಬೆಂಗಳೂರು : ಗಾಳಿ ಮಳೆಯಿಂದ ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ತಲೆಗೆ ಗಂಭೀರವಾದ ಗಾಯವಾಗಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಹೃದಯಸ್ಥಂಬನದಿಂದ ಅಕ್ಷಯ್ ಸಾವನಪ್ಪಿದ್ದಾನೆ.
ಹೌದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರ ಅಕ್ಷಯ್ ಸದ್ಯ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಲಾಗಿದ್ದು, ತಲೆಗೆ ಶಸ್ತ್ರ ಸಹ ಮಾಡಲಾಗಿದೆ. ಆದ್ರೆ, ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ದೇವರ ಮೇಲೆ ಭಾರ ಹಾಕಿ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಿನ್ನೆ ಅಕ್ಷಯ್ ಅವರ ತಾತ ಅಜ್ಜಿ ಮೊಮ್ಮಗ ಉಳಿಯಲಿ, ಆಯಸ್ಸು ಗಟ್ಟಿಯಾಗಲಿ ಕಣ್ಣು ಬಿಟ್ಟು ನಮ್ಮನ್ನ ನೋಡಲಿ ಎಂದು ಸೀತಾ ಸರ್ಕಲ್ ನಲ್ಲಿರೋ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜಯ ಮೃತ್ಯುಂಜಯ ಹೋಮ ಮಾಡಿಸಿದ್ದರು.
ಆದರೆ ಇಂದು ಅಕ್ಷಯ್ ಸಾವನಪ್ಪಿದ್ದಾನೆ. ಹೃದಯ ಸ್ತಂಭನದಿಂದ ಅಪೋಲೋ ಆಸ್ಪತ್ರೆಯಲ್ಲಿ ಅಕ್ಷಯ್ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬ್ರೇನ್ ಡೆಡ್ ಆಗಿದೆ ಅಂತ ಹೇಳಿದ್ದರು. ಜೂನ್ 15ರಂದು ಮರದ ಕೊಂಬೆ ಬಿದ್ದು ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಇಂದು ಮಧ್ಯಾಹ್ನ 1:15ಕ್ಕೆ ಅಕ್ಷಯ್ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಅಕ್ಷಯ್ ಸಾವಿನ ಬಗ್ಗೆ ಜಯನಗರ ಅಪೋಲೋ ಆಸ್ಪತ್ರೆ ಈ ಗುರುತು ಮಾಹಿತಿ ನೀಡಿದೆ.