ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಆದರೆ ನಿಷೇಧದ ನಡುವೆಯೂ ಕೂಡ ಬೈಕ್ ಟ್ಯಾಕ್ಸಿ ಓಡಾಟ ನಡೆಸುತ್ತಿದ್ದು, ಬೆಂಗಳೂರಿನ ಹಲವು ಕಡೆಗೆ ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ. ರಾಜಾಜಿನಗರ ಯಶವಂತಪುರದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಇದೀಗ ಸೀಜ್ ಮಾಡಲಾಗಿದೆ ಆರ್ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಹೌದು ಓಲಾ ಊಬರ್ ಹಾಗೂ ರಾಪಿಡೋ ಬೈಕ್ ಓಡಾಟ ನಡೆಸಲು ಇತ್ತೀಚಿಗೆ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಹಾಗಾಗಿ ಇಂದಿನಿಂದ ಓಲಾ ಉಬರ್ ಹಾಗೂ ರಾಪಿಡೊ ಬೈಕ್ ಟ್ಯಾಕ್ಸಿ ಪ್ರಚಾರ ನಿಷೇಧರಿಸಿದ್ದು, ಈ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಜೂನ್ 24ರಂದು ಮತ್ತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಬೈಕ್ ಟ್ಯಾಕ್ಸಿ ಸಂಚಾರ ನಿಷೇಧವಿದ್ದರೂ ಇದೀಗ ಬೆಂಗಳೂರಿನಲ್ಲಿ ಬೈಕ್ ಓಡಾಟ ನಡೆಸಲಾಗಿದೆ. ಹಾಗಾಗಿ ಆರ್ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.