ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಜೊತೆಗೆ ಭಾರಿ ಮಳೆ ಆಗುತ್ತಿದ್ದು , ಇದೀಗ ಭಟ್ಕಳ ತಾಲೂಕಿನ ಅಗ್ಗ ಗ್ರಾಮದ ಸೇತುವೆ ಸಂಪೂರ್ಣವಾಗಿ ಜಲಪ್ರಳವಾಗಿದೆ. ಮಳೆ ನೀರಿನಿಂದ ರಸ್ತೆ ನದಿಯಂತೆ ಆಗಿದ್ದು, ಜನ ತತ್ತರಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ಭಟ್ಕಳದಲ್ಲಿ ದಾಖಲೆಯ ಮಳೆಯಾಗಿದೆ. ಒಂದೇ ದಿನದಲ್ಲಿ 218.4 ಮಿಲಿ ಮೀಟರ್ ಮಳೆ ಸುರಿದಿದೆ.
ಇನ್ನು ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಜೋಯಿಡ ತಾಲೂಕಿನ ಸಾಂಗವೇ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪ್ರಭಾವತಿ ಎನ್ನುವವರ ಮೇಲೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರಳಿ ಬಿದ್ದಿದೆ. ಇನ್ನು ಹೊನ್ನಾವರ, ಜೋಯಿಡಾದಲ್ಲಿ ಬಿರುಗಾಳಿ ಸಮೇತ ಭಾರಿ ಮಳೆ ಸುರಿಯುತ್ತಿದೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.