ಉತ್ತರಪ್ರದೇಶ : ಜೂನ್ 12ರಂದು ಗುಜರಾತ್ನ ಅಹ್ಮದಾಬಾದ್ ನಲ್ಲಿ ವಿಮಾನ ಪಥನ ಕೊಂಡು 275 ಜನರು ಇದುವರೆಗೂ ಸಾವನಪ್ಪಿದ್ದಾರೆ. ಈ ಒಂದು ಘಟನೆ ಮಾಸುವ ಮುನ್ನವೇ ನಿನ್ನೆ ಕೇದಾರನಾಥನಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡು 7 ಜನರು ಸಜೀವ ದಹನ ಹೊಂದಿದ್ದರು. ಇದೀಗ ಉತ್ತರ ಪ್ರದೇಶದ ಲಕ್ನೌ ನಲ್ಲಿ ಏರ್ಪೋರ್ಟ್ ಲ್ಯಾಂಡಿಂಗ್ ವೇಳೆ ವಿಮಾನ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಇದೀಗ ಉತ್ತರ ಪ್ರದೇಶದ ಲಕ್ನೌ ಏರ್ಪೋರ್ಟಲ್ಲಿ ಭಾರಿ ದುರಂತವೊಂದು ತಪ್ಪಿದೆ. ಲ್ಯಾಂಡಿಂಗ್ ವೇಳೆ ಸೌದಿ ಏರ್ ಲೈನ್ಸ್ ನ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಕಂಡುಬಂದಿತ್ತು. ವಿಮಾನದ ಎಡ ಭಾಗದ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಕಿಡಿ ಹೊತ್ತಿಕೊಂಡಿದೆ. ತಕ್ಷಣ ಪೈಲೆಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ಏರ್ಪೋರ್ಟ್ ನಲ್ಲಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದೆ. ತಕ್ಷಣ ಬೆಂಕಿಯನ್ನು ನಂದಿಸಿದೆ ವಿಮಾನದಲ್ಲಿದ 250 ಹಜ್ ಯಾತ್ರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೌದಿ ಅರೇಬಿಯಾದ ಜಡ್ಡದಿಂದ ಈ ಒಂದು ವಿಮಾನ ಆಗಮಿಸಿತ್ತು. ಹೈಡ್ರಾಲಿಕ್ ಅವರಿಗೆ ಇಂದ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ.