ಶಿವಮೊಗ್ಗ : ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿರುವುದರಿಂದ ಈಗಾಗಲೇ ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಕೊಡಗು ಹಾಗು ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಿನಾಂಕ 16.06.2025 ರಂದು ಅಂದರೆ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಮಳೆ ಮತ್ತು ಗಾಳಿ ವ್ಯಾಪಕವಾಗಿರುವುದರಿಂದ ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಈ ದಿನ ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಆದೇಶದಲ್ಲಿ ತಿಳಿಸಿದ್ದಾರೆ. ರಜಾದಿನದಲ್ಲಿನ ತರಗತಿ ಪಠ್ಯವನ್ನು ಮುಂದಿನ ಅವದಿಯಲ್ಲಿ ಸರಿದೂಗಿಸುವಂತೆ ತಿಳಿಸಿದೆ ಸಾಗರ ತಹಶೀಲ್ದಾರರು ಸೂಚಿಸಿದ್ದಾರೆ.
ವಸಂತ ಬಿ ಈಶ್ವರಗೆರೆ, ಸಂಪಾದಕರು, kannadanewsnow.com 9738123234