Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ‘ರೈತ’ರಿಗೆ ಮಹತ್ವದ ಮಾಹಿತಿ: ವಿವಿಧ ಬೆಳೆಗಳಿಗೆ ‘ವಿಮೆ ನೋಂದಣಿ’ಗೆ ಆಹ್ವಾನ

14/06/2025 5:45 AM

BIG NEWS : ಅಮಾನತುಗೊಂಡಿರುವ ರಾಜ್ಯದ `ಶಾಲಾ ಶಿಕ್ಷಕರಿಗೆ ಬಿಗ್ ಶಾಕ್’ : ಸ್ಥಳ ನಿಯುಕ್ತಿಗೊಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ.!

14/06/2025 5:38 AM

ವಿದ್ಯಾರ್ಥಿಗಳೇ ಗಮನಿಸಿ : ‘ಕರ್ನಾಟಕ SSLC ಪರೀಕ್ಷೆ-3’ರ ವೇಳಾಪಟ್ಟಿ ಪ್ರಕಟ | Karnataka SSLC Exam-2 Timetable

14/06/2025 5:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಮಾನತುಗೊಂಡಿರುವ ರಾಜ್ಯದ `ಶಾಲಾ ಶಿಕ್ಷಕರಿಗೆ ಬಿಗ್ ಶಾಕ್’ : ಸ್ಥಳ ನಿಯುಕ್ತಿಗೊಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ.!
KARNATAKA

BIG NEWS : ಅಮಾನತುಗೊಂಡಿರುವ ರಾಜ್ಯದ `ಶಾಲಾ ಶಿಕ್ಷಕರಿಗೆ ಬಿಗ್ ಶಾಕ್’ : ಸ್ಥಳ ನಿಯುಕ್ತಿಗೊಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ.!

By kannadanewsnow5714/06/2025 5:38 AM

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾಗುವ ತನಕ ಅಮಾನತುಗೊಂಡಿರುವ ಶಿಕ್ಷಕರ ಸ್ಥಳ ನಿಯುಕ್ತಿಗೊಳಿಸದಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಿಕ್ಷಣ ಇಲಾಖೆಯ ಆದೇಶದಲ್ಲಿ ಏನಿದೆ?

ವಿಷಯದನ್ವಯ, 2024-25ನೇ ಸಾಲಿನ ಶಿಕ್ಷಕರ ವರ್ಗಾವಣೆ ಕುರಿತಂತೆ ಉಲ್ಲೇಖಿತ ಪತ್ರದಲ್ಲಿ ವಿಸ್ತ್ರತವಾದ ಮಾರ್ಗಸೂಚಿ ಸಹಿತ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 3 (1) (i) (ii)(iii), ಗಳ ಉಲ್ಲಂಘನೆಯ ಆರೋಪದಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ-10 (1)(ಡಿ) ರನ್ವಯ ಕೆಲವು ಶಿಕ್ಷಕರುಗಳನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಆಯಾ ವ್ಯಾಪ್ತಿಯ ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಅಮಾನತ್ತುಗೊಳಿಸಿರುವ ಪ್ರಕರಣಗಳು ಕಂಡುಬಂದಿರುತ್ತದೆ. ಅಲ್ಲದೇ ಕೆಲವು ಉಪನಿರ್ದೇಶಕರುಗಳು ನಿಯಮಬಾಹಿರವಾಗಿ ವ್ಯತಿರಿಕ್ತ ಬೋಧನಾ ವಿಷಯದ ಹುದ್ದೆಗೆ ಮತ್ತು ವರ್ಗಾವಣಾ ಕಾಯ್ದೆಯ ಸೆಕ್ಷನ್-3ರಡಿಯಲ್ಲಿ ವಿವರಿಸಿರುವಂತೆ ಜಿಲ್ಲೆಯಲ್ಲಿ ಅತೀ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಸ್ಥಳ ನಿಯುಕ್ತಿಗೊಳಿಸದೇ ಆಯಾ ವಲಯದಲ್ಲಿನ ಕಡಿಮೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಹಾಗೂ ಅಂತಹಾ ಶಾಲೆಯಲ್ಲಿ ಶಿಕ್ಷಕರ ಅಗತ್ಯತೆ ಇಲ್ಲದಿದ್ದರೂ ವರ್ಗಾವಣಾ ಕಾಯ್ದೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ.

ಈಗಾಗಲೇ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಪ್ರಸ್ತುತ ಸ್ಥಳ ನಿಯುಕ್ತಿಯಂತಹಾ ಕ್ರಮಗಳನ್ನು ಕೈಗೊಂಡಲ್ಲಿ ವರ್ಗಾವಣೆಗೆ ನಿಗಧಿಪಡಿಸಿದ ವಿಷಯವಾರು ಹಾಗೂ ತಾಲ್ಲೂಕುವಾರು ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುತ್ತದೆ. ಯಾವುದೇ ಶಿಕ್ಷಕರನ್ನು ಸ್ಥಳನಿಯುಕ್ತಿಗೊಳಿಸಿ ತಂತ್ರಾಂಶದಲ್ಲಿಯೇ ಕಡ್ಡಾಯವಾಗಿ ಮಾಹಿತಿಯನ್ನು ಇಂದೀಕರಿಸಬೇಕಾಗುತ್ತದೆ. ಆದರೆ ಪ್ರಸ್ತುತ ವರ್ಗಾವಣೆಯ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಇಡೀ ವರ್ಗಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅಮಾನತ್ತುಗೊಂಡಿರುವ ಶಿಕ್ಷಕರುಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಆಯುಕ್ತರ ಅನುಮೋದನೆ ಇಲ್ಲದೇ ಅಮಾನತ್ತು ತೆರವುಗೊಳಿಸಿ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಅವಕಾಶವಿರುವುದಿಲ್ಲ.

ಒಂದು ವೇಳೆ ಅಮಾನತ್ತು ಪ್ರಕರಣಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದಲ್ಲಿ ಅಂತಹಾ ಪ್ರಕರಣಗಳಲ್ಲಿ ಕೂಡಲೆ ತಡೆಯಾಜ್ಞೆಯನ್ನು ತೆರವುಗೊಳಿಸಲು ಇಲಾಖಾ ಕ್ರಮವನ್ನು ಸಮರ್ಥಿಸಿಕೊಂಡು ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಮತ್ತು ಆಕ್ಷೇಪಣಾ ಹೇಳಿಕೆಯನ್ನು ತುರ್ತಾಗಿ ಸಲ್ಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು. ಒಂದು ವೇಳೆ ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಲೇಬೇಕಾದಲ್ಲಿ ಅಂತಹಾ ಶಿಕ್ಷಕರ ಪಟ್ಟಿಯನ್ನು ಸೂಕ್ತ ಕಾರಣಗಳೊಂದಿಗೆ ಪೂರಕ ದಾಖಲೆಗಳನ್ನು ಮಾನ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸತಕ್ಕದ್ದು. ಆದ್ದರಿಂದ ಮುಂದಿನ ಆದೇಶದವರೆಗೂ ಯಾವುದೇ ಶಿಕ್ಷಕರ ಬಿಡುಗಡೆಗೊಳಿಸಲು ಸೇರ್ಪಡೆಗೊಳಿಸದಂತೆ ಸಕ್ಷಮ ಪ್ರಾಧಿಕಾರಿಗಳು ಅಗತ್ಯ ಕ್ರಮವಹಿಸಲು ತಿಳಿಸಿದೆ. ಈ ವಿಚಾರದಲ್ಲಿ ಯಾವುದೇ ಲೋಪಕಂಡುಬಂದಲ್ಲಿ ಅಂತಹ ಪ್ರಾಧಿಕಾರಿಗಳನ್ನ ನೇರಹೊಣೆಗಾರರನ್ನಾಗಿ ಮಾಡಲಾಗುವುದು.

 

BIG NEWS: 'Big shock for suspended teachers': Important order from the Education Department not to assign places!
Share. Facebook Twitter LinkedIn WhatsApp Email

Related Posts

ರಾಜ್ಯದ ‘ರೈತ’ರಿಗೆ ಮಹತ್ವದ ಮಾಹಿತಿ: ವಿವಿಧ ಬೆಳೆಗಳಿಗೆ ‘ವಿಮೆ ನೋಂದಣಿ’ಗೆ ಆಹ್ವಾನ

14/06/2025 5:45 AM1 Min Read

ವಿದ್ಯಾರ್ಥಿಗಳೇ ಗಮನಿಸಿ : ‘ಕರ್ನಾಟಕ SSLC ಪರೀಕ್ಷೆ-3’ರ ವೇಳಾಪಟ್ಟಿ ಪ್ರಕಟ | Karnataka SSLC Exam-2 Timetable

14/06/2025 5:38 AM1 Min Read

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

13/06/2025 9:55 PM1 Min Read
Recent News

ರಾಜ್ಯದ ‘ರೈತ’ರಿಗೆ ಮಹತ್ವದ ಮಾಹಿತಿ: ವಿವಿಧ ಬೆಳೆಗಳಿಗೆ ‘ವಿಮೆ ನೋಂದಣಿ’ಗೆ ಆಹ್ವಾನ

14/06/2025 5:45 AM

BIG NEWS : ಅಮಾನತುಗೊಂಡಿರುವ ರಾಜ್ಯದ `ಶಾಲಾ ಶಿಕ್ಷಕರಿಗೆ ಬಿಗ್ ಶಾಕ್’ : ಸ್ಥಳ ನಿಯುಕ್ತಿಗೊಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ.!

14/06/2025 5:38 AM

ವಿದ್ಯಾರ್ಥಿಗಳೇ ಗಮನಿಸಿ : ‘ಕರ್ನಾಟಕ SSLC ಪರೀಕ್ಷೆ-3’ರ ವೇಳಾಪಟ್ಟಿ ಪ್ರಕಟ | Karnataka SSLC Exam-2 Timetable

14/06/2025 5:38 AM

BIG NEWS: ‘ಒಂದು ದೇಶ, ಒಂದು ಚುನಾವಣೆ’ ಮಾದರಿಯಲ್ಲೇ ‘ಶಿಕ್ಷಣದಲ್ಲೂ ಏಕರೂಪ’? ಕೇಂದ್ರ ಸರ್ಕಾರದಿಂದ ಪ್ರಕ್ರಿಯೆ ಆರಂಭ!

14/06/2025 5:30 AM
State News
KARNATAKA

ರಾಜ್ಯದ ‘ರೈತ’ರಿಗೆ ಮಹತ್ವದ ಮಾಹಿತಿ: ವಿವಿಧ ಬೆಳೆಗಳಿಗೆ ‘ವಿಮೆ ನೋಂದಣಿ’ಗೆ ಆಹ್ವಾನ

By kannadanewsnow0914/06/2025 5:45 AM KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆಗಳ ಬೆಳೆ…

BIG NEWS : ಅಮಾನತುಗೊಂಡಿರುವ ರಾಜ್ಯದ `ಶಾಲಾ ಶಿಕ್ಷಕರಿಗೆ ಬಿಗ್ ಶಾಕ್’ : ಸ್ಥಳ ನಿಯುಕ್ತಿಗೊಳಿಸದಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ.!

14/06/2025 5:38 AM

ವಿದ್ಯಾರ್ಥಿಗಳೇ ಗಮನಿಸಿ : ‘ಕರ್ನಾಟಕ SSLC ಪರೀಕ್ಷೆ-3’ರ ವೇಳಾಪಟ್ಟಿ ಪ್ರಕಟ | Karnataka SSLC Exam-2 Timetable

14/06/2025 5:38 AM

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ನಿವೃತ್ತ ನೌಕರರಿಗೆ UPS ಪಿಂಚಣಿ ಯೋಜನೆ ಬಗ್ಗೆ ಮಹತ್ವದ ಮಾಹಿತಿ

13/06/2025 9:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.