ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡತೇ ಹನುಮಂತ ಗೆದ್ದು ಬೀಗಿದ್ದಾನೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ.
ಹೌದು ಬಿಗ್ ಬಾಸ್ 11 ಸೀಸನ್ ಬಳಿಕ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದು, ಅಭಿಮಾನಿಗಳು ತೀವ್ರ ನೋವಿನಲ್ಲಿದ್ದಾರೆ. ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ಬಿಗ್ ಬಾಸ್ ಕನ್ನಡ 12 ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.
ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟ ಸುಳಿವು ನೀಡಿತ್ತು. ಇದೀಗ 12 ಸೀಸನ್ ನ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡ್ತಾರಂತೆ ಎಂಬ ಅಂತೆ – ಕಂತೆಗಳು ಹುಟ್ಟಿಕೊಂಡಿವೆ.
ಸುದೀಪ್ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ.
ಇನ್ನೂ ಈ ಜಾಗದಲ್ಲಿ ನಟ ಕಿಚ್ಚ ಸುದೀಪ್ ಅವರನ್ನ ಬಿಟ್ಟರೇ ಬೇರೆ ಯಾರನ್ನೂ ಕಿರುತೆರೆ ವೀಕ್ಷಕರು ಕೂಡ ಬೇರೆ ಊಹಿಸಿಕೊಂಡಿಲ್ಲ.ಆದರೆ ಮುಂದಿನ ಸೀಸನ್ ನಿರೂಪಣೆ ಮಾಡೋದು ಯಾರು? ಎನ್ನುವ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಈ ಹಿಂದೆ ಉತ್ತರವನ್ನ ಕೊಟ್ಟಿದ್ದರು. ಇದೀಗ ಮತ್ತೆ ಸುದೀಪ್ ಅವರನ್ನು ಕರೆತರುತ್ತೇವೆ ಎಂದು ಪ್ರಕಾಶ್ ಹೇಳಿದ್ದಾರೆ.