ಬಳ್ಳಾರಿ : ಬಳ್ಳಾರಿ ಚುನಾವಣೆ ಬರೋಬ್ಬರಿ 21 ಕೋಟಿ ರೂ. ಬಳಕೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಸಂಸದ ಇ ತುಕರಾಂ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಿಗ್ಗೆಯೇ ಇಡಿ ಅಧಿಕಾರಿಗಳು ಸಂಸದರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣೆ ವೇಳೆ ಭಾರೀ ಹಣ ಖರ್ಚು ಮಾಡಿರುವ ಆರೋಪದ ಮೇಲೆ ಇ ತುಕರಾಂ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು.
ಇನ್ನು ಕಾಂಗ್ರೆಸ್ ಶಾಸಕರಾದ ನಾರಾ ಭರತ್ ರೆಡ್ಡಿ, ಗಣೇಶ್ (ಕಂಪ್ಲಿ ಕ್ಷೇತ್ರ), ಶ್ರೀನಿವಾಸ್ ಅವರ ಮನೆ ಮೇಲೂ ಇ.ಡಿ ದಾಳಿ ಮಾಡಿದೆ. ಮಾಜಿ ಸಚಿವ ನಾಗೇಂದ್ರ ಅವರ ಪಿಎ ಗೋವರ್ಧನ್ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪದ ಹಿನ್ನೆಲೆ ಶೋಧ ನಡೆದಿದೆ. ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.








