ಬೆಂಗಳೂರು: ನಗರದಲ್ಲಿ ನಕ್ಷೆ ಮಂಜೂರಾತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಇ-ಖಾತಾ ಕಡ್ಡಾಗೊಳಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷ ನಾಗರೀಕರಿಗೆ ಅಂತಿಮ ಇ-ಖಾತಾ ವಿತರಣೆ ಮಾಡಿರುವುದಾಗಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಬೆಂಗಳೂರಲ್ಲಿ ಈವರೆಗೆ 5 ಲಕ್ಷ ನಾಗರಿಕರು ಅಂತಿಮ ಇ-ಖಾತಾ ಪಡೆದಿದ್ದಾರೆ. 25 ಲಕ್ಷಕ್ಕಿಂತ ಹೆಚ್ಚು ಡ್ರಾಫ್ಟ್ ಇ-ಖಾತಾ ಆನ್ಲೈನ್ನಲ್ಲಿ ಲಭ್ಯವಿದೆ. ನಾಗರಿಕರು ತಮ್ಮ ಆಧಾರ್ ಸಂಖ್ಯೆ, ಮಾರಾಟ ದಸ್ತಾವೇಜಿನ ಸಂಖ್ಯೆ, ಆಸ್ತಿಯ ತೆರಿಗೆ ಐ.ಡಿ, ಬೆಸ್ಕಾಂ ಸಂಖ್ಯೆ (ಖಾಲಿ ಜಾಗಕ್ಕೆ ಐಚ್ಛಿಕ), ಮತ್ತು ಆಸ್ತಿಯ ಫೋಟೋ ಹಾಕಬೇಕು. ಈ ಮಾಹಿತಿಗಳನ್ನು ನೀಡಿದ ನಂತರ ನಾಗರಿಕರಿಗೆ ಅಂತಿಮ ಇ-ಖಾತಾ 1 ರಿಂದ 2 ದಿನಗಳಲ್ಲಿ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಈವರೆಗೆ ಸುಮಾರು 5 ಲಕ್ಷ ನಾಗರಿಕರಿಂದ ತಮ್ಮ ಇ-ಖಾತಾ ಪಡೆಯಲಾಗಿದೆ. ಪ್ರತಿದಿನ ಸುಮಾರು 3,000 ಜನರು ಈ ಪ್ರಕ್ರಿಯೆ ಮಾಡುತ್ತಿದ್ದಾರೆ ಮತ್ತು ಇಷ್ಟೇ ಸಂಖ್ಯೆಯವರಿಗೆ ಇ-ಖಾತಾ ಅನುಮೋದನೆ ಸಿಗುತ್ತಿದೆ. ಆದ್ದರಿಂದ ನಾಗರಿಕರು ಇ-ಖಾತಾ ಗೆ ಅರ್ಜಿ ನೀಡಿದ ನಂತರ ಅದು 1 ರಿಂದ 2 ದಿನಗಳಲ್ಲಿ ಅನುಮೋದಿತವಾಗುತ್ತದೆ. ನಿಮ್ಮ ಇ-ಖಾತಾವನ್ನು BBMPeAasthi.karnataka.gov.in ನಲ್ಲಿ ಆನ್ಲೈನ್ನಲ್ಲಿ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.
BREAKING: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸ ಮುಂದೂಡಿಕೆ | Axiom-4 Mission
Watch Video: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗಿನಲ್ಲಿ ಭೀಕರ ಸ್ಪೋಟ | Kerala coast