ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವರ್ಗಾಯಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಸಿಐಡಿ ಅಧಿಕಾರಿಗಳ ತಂಡವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಯಿತು.
ಇಂದು ಚಿನ್ನಸ್ವಾಮಿ ಕ್ರೀಡಾಂಗಣ ದುರಂತ ನಡೆದಂತ ಸ್ಥಳಕ್ಕೆ ಸಿಐಡಿ ಅಧಿಕಾರಿಗಳ ತಂಡವು ಭೇಟಿ ನೀಡಿತು. ಓರ್ವ ಇನ್ಸ್ ಪೆಕ್ಟರ್ ಹಂತದ ಅಧಿಕಾರಿ ಸೇರಿದಂತೆ ವಿವಿಧ ಸಿಬ್ಬಂದಿಗಳ ತಂಡವು ಭೇಟಿ ನೀಡಿತು. ದುರಂತ ನಡೆದಂತ ಸ್ಥಳದಲ್ಲಿ ಘಟನೆಯ ಸಂಬಂಧ ವಿವಿಧ ರೀತಿಯಲ್ಲಿ ಮಾಹಿತಿಯನ್ನು ಪರಿಶೀಲಿಸಿತು.
ಇದೇ ಸಂದರ್ಭದಲ್ಲಿ ಸಿಐಡಿ ತಂಡದ ಮುಂದೆ ಕೆ ಎಸ್ ಸಿ ಎ ಅಧ್ಯಕ್ಷರು, ಸಿಬ್ಬಂದಿಗಳು ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಅವರು ನೀಡಿದಂತ ಮಾಹಿತಿಯನ್ನು ಸಿಐಡಿ ಅಧಿಕಾರಿಗಳ ತಂಡವು ದಾಖಲಿಸಿಕೊಂಡಿದೆ.
BIG NEWS: ಕಾಲ್ತುಳಿತ, ಮರಣಹೋಮಕ್ಕೆ ಸಿಎಂ-ಡಿಸಿಎಂ ಹೊಣೆಗಾರಷ್ಟೇ ಅಲ್ಲ, ಕಾರಣಕರ್ತರು: ರಾಜ್ಯಪಾಲರಿಗೆ CRF ವರದಿ








