ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೀವು ಅಸ್ವಸ್ಥರಾಗಿದ್ದರೆ, ನಿಮ್ಮನ್ನು ಪರೀಕ್ಷಿಸಿಕೊಳ್ಳಲು ಆಸ್ಪತ್ರೆಗಳು ಅಥವಾ ಪ್ರಯೋಗಾಲಯಗಳಿಂದ ಸಂದೇಶಗಳು ಅಥವಾ ಕರೆಗಳು ಬರುತ್ತಿವೆಯೇ? ಹೌದು ಎಂದಾದರೆ, ಅನಗತ್ಯ ಸ್ಪ್ಯಾಮ್ ಸಂದೇಶಗಳಿಂದ ತುಂಬಿರುವ ನೂರಾರು ಜನರಲ್ಲಿ ನೀವು ಒಬ್ಬರು.
ಇತ್ತೀಚಿನ ರಾಷ್ಟ್ರವ್ಯಾಪಿ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳದಿಂದಾಗಿ ಸುಮಾರು 5 ಜನರಲ್ಲಿ ಒಬ್ಬರಿಗೆ ಅಂದ್ರೆ ಈ ಹಿಂದೆ ಕೋವಿಡ್-19 ಲಸಿಕೆ ಅಥವಾ ಪರೀಕ್ಷೆ ಮಾಡಿಸಿಕೊಂಡ ಆಸ್ಪತ್ರೆ ಮತ್ತು ಪ್ರಯೋಗಾಲಯಗಳಿಂದ ಪ್ರಚಾರದ ಸಂದೇಶಗಳು ಬರುತ್ತಿವೆ.
ವಾಸ್ತವವಾಗಿ, ಇತ್ತೀಚೆಗೆ ಬಿಡುಗಡೆಯಾದ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು, 2025ರ ಅಡಿಯಲ್ಲಿ, ಗ್ರಾಹಕರು ತಮ್ಮ ಸಂಪರ್ಕ ವಿವರಗಳನ್ನ ಹಂಚಿಕೊಂಡಿದ್ದರು. ಆದ್ರೆ, ಇದನ್ನ ಸುರಕ್ಷಿತವಾಗಿರಿಸಿಕೊಳ್ಳಬೇಕು, ಸ್ಪಷ್ಟ ಅನುಮತಿಯನ್ನ ನೀಡದ ಹೊರತು ಅವರು ಸ್ಪ್ಯಾಮ್ ಕರೆಗಳನ್ನ ಮಾಡಲು ಅಥವಾ ಪ್ರಚಾರ ಸಂದೇಶಗಳನ್ನು ಕಳುಹಿಸಲು ಬಳಸುವಂತಿಲ್ಲ.
ಆದಾಗ್ಯೂ, ಲೋಕಲ್ಸರ್ಕಲ್ಸ್ ಸಮೀಕ್ಷೆಯು ಅನೇಕ ಸಂದರ್ಭಗಳಲ್ಲಿ, ಒಮ್ಮೆ ರೋಗನಿರ್ಣಯ ಚಿಕಿತ್ಸಾಲಯ ಅಥವಾ ಆಸ್ಪತ್ರೆಯ ಸೇವೆಗಳನ್ನ ಬಳಸಿದ ವ್ಯಕ್ತಿಗೆ ವಿಪಾರೀತ ಎನ್ನುವಂತೆ ಸ್ಪ್ಯಾಮ್ ಸಂದೇಶಗಳು ಮತ್ತು ಕರೆಗಳು ಬರುತ್ತಿವೆ ಎಂದು ಕಂಡುಹಿಡಿದಿದೆ.
BREAKING : 2026ರ ಏಪ್ರಿಲ್’ನಲ್ಲಿ ಬಾಂಗ್ಲಾದೇಶದಲ್ಲಿ ‘ರಾಷ್ಟ್ರೀಯ ಚುನಾವಣೆ’ ಆಯೋಜನೆ ; ‘ಮೊಹಮ್ಮದ್ ಯೂನಸ್’ ಘೋಷಣೆ