ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಚಾಲಕ ಕಂ ನಿರ್ವಾಹಕ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಕೆ ಎಸ್ ಆರ್ ಟಿ ಸಿಯಿಂದ ಕರೆಯಲಾಗಿದ್ದಂತ ಚಾಲಕ ಕಂ ನಿರ್ವಾಹಕ ಹುದ್ದೆಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ನಿಗಮದ ಕೇಂದ್ರ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ನಿಗಮದ ವೆಬ್ ಸೈಟ್ www.ksrtcjobs.karnataka.gov.in ನಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ.
ಚಾಲಕ ಕಂ ನಿರ್ವಾಹಕರ ಹುದ್ದೆಯ ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕಗಳು ಹಾಗೂ ಹುಟ್ಟಿದ ದಿನಾಂಕದಂತೆ ವಿವರವನ್ನು ಸಂಭವನೀಯ ಆಯ್ಕೆಪಟ್ಟಿಯಲ್ಲಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಇನ್ನೂ ಸಂಭವನೀಯ ಆಯ್ಕೆಪಟ್ಟಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ದಿನಾಂಕ: 11-06-2025 ರ ಸಂಜೆ 5.30 ರ ಒಳಗಾಗಿ ಕರಾರಸಾ ನಿಗಮ, ಕೇಂದ್ರ ಕಛೇರಿ, ನೇಮಕಾತಿ ಶಾಖೆ, ಶಾಂತಿನಗರ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ನಿಗಮದ ಅಧಿಕೃತ ಇ-ಮೇಲ್ dycpmrct@ksrtc.org ಮುಖಾಂತರ ಸಲ್ಲಿಸಲು ತಿಳಿಸಲಾಗಿದೆ. ದಿನಾಂಕ: 1-06-2025 ರ ನಂತರ ಸ್ವೀಕಲಿಸಲಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ನೇಮಕಾತಿಯು ಪಾರದರ್ಶಕವಾಗಿದ್ದು ಯಾವುದೇ ಆಮಿಷ/ ಅವ್ಯವಹಾರದಲ್ಲಿ ಅಭ್ಯರ್ಥಿಗಳು ತೊಡಗದಂತೆ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದ್ದಾರೆ.