ರಾಯಚೂರು : ಹೋಂ ಗಾರ್ಡ್ ಕೆಲಸಕ್ಕೆ ನಿಯೋಜಿಸಲು 6 ಸಾವಿರ ಲಂಚ ಸ್ವೀಕರಿಸುವ ಹೋಂ ಗಾರ್ಡ್ ಕಮಾಂಡೆಂಟ್ ಒಬ್ಬರು ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಾರಪ್ಪ ಎಂಬುವರಿಗೆ ಹೋಂ ಗಾರ್ಡ್ ಕೆಲಸಕ್ಕೆ ನಿಯೋಜಿಸಲು ಲಂಚ ಸ್ವೀಕರಿಸಿದ್ದಾರೆ. ಮಹಿಳಾ ಠಾಣೆಗೆ ಕೆಲಸಕ್ಕೆ ನಿಯೋಜಿಸಲು 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 6,000 ಲಂಚ ಪಡೆಯುವಾಗ ಜಂಬಣ್ಣ ರಾಮಸ್ವಾಮಿ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಜಂಬಣ್ಣ ರಾಮಸ್ವಾಮಿ ರಾಯಚೂರು ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿನ್ನೆ ರಾತ್ರಿ ರಾಯಚೂರಲ್ಲಿ ಜಂಬಣ್ಣ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಡಗುಬ್ಬಿ ನೇತ್ರತ್ವದಲ್ಲಿ ದಾಳಿ ನಡೆಸಲಾಗಿತ್ತು. ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಹೋಂ ಗಾರ್ಡ್ ಕಮಾಂಡೆಂಟ್ ಜಂಬಣ್ಣ ರಾಮಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ