ಬೆಂಗಳೂರು : ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ನಿಮ್ಮ ಮನೆಯಲ್ಲೇ ಕುಳಿತು ಬಿ.ಬಿ.ಎಂ.ಪಿ ಇ-ಖಾತೆಯನ್ನು ಪಡೆದುಕೊಳ್ಳಬಹುದು.
ಹೌದು, ಜನಸೇವಕರಿಂದ ಸೇವೆ ಪಡೆಯಲು ಕರೆ ಮಾಡಿ 080-49203888 ಅಥವಾ https://janasevaka.karnataka.gov.in ಭೇಟಿ ನೀಡಿ
ಇವುಗಳೊಂದಿಗೆ ಸಿದ್ಧರಾಗಿರಿ.
1) ಮಾಲೀಕರ ಆಧಾರ್
2) ಆಸ್ತಿ ತೆರಿಗೆ ಎಸ್.ಎ.ಎಸ್ ಅರ್ಜಿ ಸಂಖ್ಯೆ
3) ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತದೆ )
4) ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
5) ಸ್ವತ್ತಿನ ಛಾಯಾಚಿತ್ರ
ಜನಸೇವಕ
ನಿಮ್ಮ ಮನೆಗೆ ಬಂದು ಇ-ಖಾತೆಗೆ ಅರ್ಜಿ ಸಲ್ಲಿಸುತ್ತಾರೆ. ನೀವು ಅಂತಿಮ ಇ-ಖಾತೆಯನ್ನು 2-3 ದಿನಗಳಲ್ಲಿ ಪಡೆಯಬಹುದು.
ಯಾವುದೇ ಬಿ.ಬಿ.ಎಂ.ಪಿ ಕಚೇರಿಗೆ ಭೇಟಿ ನೀಡಬೇಡಿ ಅಥವಾ ಕರೆ ಮಾಡಬೇಡಿ.
ಜನಸೇವಕನಿಗೆ ಪಾವತಿಸಬೇಕಾದ ಮೊತ್ತ
- ಇ-ಖಾತೆ ಅರ್ಜಿಗೆ ರೂ.45/-
- ಪ್ರತಿ ಪುಟಕ್ಕೆ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ರೂ.5/-
- ನಿಮ್ಮ ಮನೆ ಬಾಗಿಲಿಗೆ ಜನಸೇವಕನ ដ 5. 115/-