Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ : ಏನಿದು ಫಾರ್ಮ್ 143? ಯಾರಿಗೆ ಅನ್ವಯ? ತಿಳಿಯಿರಿ

16/04/2026 9:45 AM

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ: ಸಾರ್ವಜನಿಕರಿಗೆ ಈ ಸಲಹೆ ಪಾಲನೆಗೆ ಆರೋಗ್ಯ ಇಲಾಖೆ ಸೂಚನೆ
KARNATAKA

BIG NEWS: ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ: ಸಾರ್ವಜನಿಕರಿಗೆ ಈ ಸಲಹೆ ಪಾಲನೆಗೆ ಆರೋಗ್ಯ ಇಲಾಖೆ ಸೂಚನೆ

By kannadanewsnow0931/05/2025 6:00 PM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಈ ಸಲಹೆ ಪಾಲಿಸುವಂತೆ ಸೂಚಿಸಿದೆ.

ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೋವಿಡ್-19 ಕಣ್ಗಾವಲು ಮತ್ತು ಸುರಕ್ಷತೆಯ ಸಲಹೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಕ್ರಮೇಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗ ತಡೆಗಟ್ಟಲು, ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ಆರೈಕೆಯನ್ನು ಒದಗಿಸಲು ರಾಜ್ಯವು ನಿರಂತರ ಪುಯತ್ನಗಳ ಮೂಲಕ ಅದರ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಮುಂದುವರೆಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಾಗರಿಕರು ಭಯಭೀತರಾಗದಂತೆ ಹಾಗೂ ಜಾಗರೂಕರಾಗಿದ್ದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪುಯತ್ನಗಳನ್ನು ಸಕ್ರಿಯವಾಗಿ ಮಾಡುವಂತೆ ಈ ಮೂಲಕ ವಿನಂತಿಸುತ್ತದೆ. ಯಾವುದೇ ಹೊಸ ರೂಪಾಂತರಗಳು ಅಥವಾ ಸಂಭಾವ್ಯ ಉಲ್ಬಣ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಸಾರ್ವಜನಿಕರ ನಿರಂತರ ಸಹಕಾರವು ಅತ್ಯಗತ್ಯವಾಗಿರುತ್ತದೆ. ನಿಮ್ಮ ಆರೋಗ್ಯ, ನಮ್ಮ ಆದ್ಯತೆ ಎಂದಿದೆ.

ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು:

1. ಜಾಗರೂಕರಾಗಿರಿ, ಆತಂಕಪಡಬೇಡಿ: ಅಧಿಕೃತ ಮೂಲಗಳ ಮೂಲಕ ಮಾಹಿತಿ ಪಡೆಯಿರಿ, ಪರಿಶೀಲಿಸದ ಮಾಹಿತಿಯನ್ನು ಪರಿಗಣಿಸದಿರಿ.

2. ಆರೋಗ್ಯ ಸಿಬ್ಬಂದಿಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ: ಅಗತ್ಯ ಅನುಸರಣೆಗಾಗಿ ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ.

3. ಜವಾಬ್ದಾರಿಯುತ ನಡವಳಿಕೆಯನ್ನು ಅಭ್ಯಾಸ ಮಾಡಿ: ಜನದಟ್ಟಣೆಯ ಸ್ಥಳಗಳಲ್ಲಿ mask ಧರಿಸಿ, ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ.

4. ರೋಗಲಕ್ಷಣಗಳನ್ನು ಮೊದಲೇ ವರದಿ ಮಾಡಿ: ಜ್ವರ, ಕೆಮ್ಮು, ಎದೆನೋವು ಅಥವಾ ಉಸಿರಾಟದ ತೊಂದರೆ ಅನುಭವಿಸಿದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.

5. ಬೆಂಬಲ ಪರೀಕ್ಷೆ ಮತ್ತು ಕಣ್ಯಾವಲು: Random ಮಾದರಿಗಳ ಪರೀಕ್ಷೆಗೆ ಸಹಕರಿಸಿ ಮತ್ತು ಕಣ್ಯಾವಲುಗಾಗಿ ಮಾದರಿ ಸಂಗ್ರಹವನ್ನು ಅನುಮತಿಸಿ.

6. ಸಮುದಾಯ ಮೇಲ್ವಿಚಾರಣೆ: IHIP ಪೋರ್ಟಲ್‌ನ ಸಮುದಾಯ ಮೇಲ್ವಿಚಾರಣಾ ಉಪಕರಣದ ಮೂಲಕ COVID-19 ತರಹದ ರೋಗಲಕ್ಷಣಗಳಲ್ಲಿ ಅಸಾಮಾನ್ಯ ಹೆಚ್ಚಳವನ್ನು ವರದಿ ಮಾಡಿ.

7. ಶಾಲೆಗಳಲ್ಲಿ ಕಾವಲು: ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿಯೇ ಇರಿಸಿ, ರೋಗಲಕ್ಷಣಗಳಿಗಾಗಿ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಿ, ನೈರ್ಮಲ್ಯವನ್ನು ಉತ್ತೇಜಿಸಿ, ಸರಿಯಾದ ಗಾಳಿಯನ್ನು ಖಚಿತಪಡಿಸಿಕೊಳ್ಳಿ.

8. ನೈರ್ಮಲ್ಯ ಮತ್ತು ಪರಿಸರ ಜಾಗೃತಿ: ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ, ಸಾರ್ವಜನಿಕ ವುದೇಶಗಳನ್ನು ಸ್ವಚ್ಛವಾಗಿಡಿ.

9. ಸರ್ಕಾರದ ಪ್ರತಿಕ್ರಿಯೆ: ಸರ್ಕಾರ ಎಚ್ಚರವಾಗಿದೆ; ಸಾಮಾನ್ಯ ಜೀವನವನ್ನು ನಡೆಸಿ ಆದರೆ ಸಲಹೆಗಳನ್ನು ಅನುಸರಿಸಿ.

10. ಆರೋಗ್ಯ ಸಲಹೆಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1800 425 8330 ಗೆ ಕರೆ ಮಾಡಿ ಹಾಗೂ ರೋಗಿಗಳ ತುರ್ತು ಸಾಗಣೆಗೆ 108 ಗೆ ಕರೆ ಮಾಡಿ.

ಒಟ್ಟಾಗಿ, ನಾವು ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಿಕೊಳ್ಳುವ ಮೂಲಕ ಸಂಭಾವ್ಯ ಅನಾರೋಗ್ಯಗಳನ್ನು ಶೀಘ್ರವಾಗಿ ಗುರುತಿಸಿ, ನಿಯಂತ್ರಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಅಧಿಕೃತ ವೆಬ್ಬೆಟ್ ಗೆ ಭೇಟಿ ನೀಡಿ: https://hfwcom.karnataka.gov.in ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ತಿಳಿಸಿದ್ದಾರೆ.

SHOCKING : ಚಾಮರಾಜನಗರ : ಕಾಂಪೌಂಡ್‌ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!

ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Share. Facebook Twitter LinkedIn WhatsApp Email

Related Posts

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM2 Mins Read

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM2 Mins Read

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM2 Mins Read
Recent News

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ : ಏನಿದು ಫಾರ್ಮ್ 143? ಯಾರಿಗೆ ಅನ್ವಯ? ತಿಳಿಯಿರಿ

16/04/2026 9:45 AM

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

16/04/2026 9:37 AM

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಹೊಸ ಕ್ಷೇತ್ರ ಪುನರ್ವಿಂಗಡಣೆ ಬಿಲ್: ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಸೀಟು ಮೀಸಲು; ಕೇಂದ್ರ ಸರ್ಕಾರದ ಐತಿಹಾಸಿಕ ಹೆಜ್ಜೆ!

16/04/2026 9:27 AM
State News
KARNATAKA

ಹೂಡಿಕೆದಾರ ನಾಮಿನಿ ಇಲ್ಲದೆ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹಣ ಏನಾಗುತ್ತದೆ? ಇಲ್ಲಿದೆ ವಿವರ

By kannadanewsnow5716/04/2026 9:37 AM KARNATAKA 2 Mins Read

ಬ್ಯಾಂಕ್ ಖಾತೆ, ಎಫ್‌ಡಿ ಅಥವಾ ಮ್ಯೂಚುವಲ್ ಫಂಡ್ ಹೀಗೆ ಯಾವುದೇ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ‘ನಾಮಿನಿ’ (ವಾರಸುದಾರರು) ಹೆಸರನ್ನು…

ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಹೂಡಿಕೆ ಮಾಡಿದರೆ ತಿಂಗಳಿಗೆ ₹5,000 ಪೆನ್ಷನ್ ಫಿಕ್ಸ್.!

16/04/2026 9:31 AM

ಉದ್ಯೋಗವಾರ್ತೆ : `SSLC,PUC, ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ‘SSC’ ಯಿಂದ 3,003 ಹುದ್ದೆಗಳಿಗೆ ಅರ್ಜಿ ಆಹ್ವಾನ

16/04/2026 9:14 AM

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

16/04/2026 9:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.