ಬೆಂಗಳೂರು : ಬಹಳ ದಿನಗಳಿಂದ ತಲೆ ನೋವಾಗಿ ಪರಿಣಮಿಸಿದ್ದ ಕುಖ್ಯಾತ ಇಬ್ಬರೂ ಕಳ್ಳರನ್ನು ಇದೀಗ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು ಕುಖ್ಯಾತ ಮನೆಗಳ್ಳ ಏಡ್ಸ್ ಮುರುಗನ್ ಸಹಚರರು ಎಂದು ತಿಳಿದುಬಂದಿದೆ. ಬೆಂಗಳೂರಿನ ಎಚ್ಎಎಲ್ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿ 600 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ತಮಿಳುನಾಡು ಮೂಲದ ದಿನಕರನ್ ಮತ್ತು ರಘುರಾಮ್ ಆರೋಪಿಗಳು ಎಂದು ತಿಳಿದುಬಂದಿದೆ. ಬೆಂಗಳೂರಿನ ಪೊಲೀಸರಿಗೆ ಬಹಳ ತಲೆನೋವಾಗಿದ್ದರು. ತಿರುವಾಯುರ್ನಿಂದ ಬಸ್ ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳೇ ಈ ಕದೀಮರಿಗೆ ಟಾರ್ಗೆಟ್ ಆಗಿದ್ದವು.
ಬೆಳಿಗ್ಗೆ ಬೇಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿಯ ವೇಳೆ ಅಂತಹ ಮನೆಗಳನ್ನು ಕಳ್ಳತನ ಮಾಡುತ್ತಿದ್ದರು. ಕಾರಿನ ಜಾಕ್ ರಾಡ್ ಬಳಸಿ ಆರೋಪಿಗಳು ಮನೆಯ ಕೆಟಕಿಗಳನ್ನು ಆರೋಪಿಗಳ ಬಳಿದ 600 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರು ಕುಖ್ಯಾತ ಮನೆಗಳ ಏಡ್ಸ್ ಮುರುಗನ್ ಸಹಚರರು ಎಂದು ತಿಳಿದುಬಂದಿದೆ.