ಅಥಣಿ: ಹಳ್ಳದಲ್ಲಿ ಸಾಗುತ್ತಿದ್ದಂತ ವೇಳೆಯಲ್ಲಿ ದಾರಿ ಕಾಣದೇ ಎತ್ತಿನ ಗಾಡಿಯೊಂದು ಮುಗುಚಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಒಂದು ಎತ್ತು ಸಾವನ್ನಪ್ಪಿರುವಂತ ಘಟನೆ ಅಥಣಿಯಲ್ಲಿ ನಡೆದಿದೆ.
ನಿರಂತರವಾಗಿ ಸುರಿಯುತ್ತಿರುವಂತ ಮಳೆಯಿಂದಾಗಿ ಹಳ್ಳಕ್ಕೆ ಸೇತುವೆ ಇಲ್ಲದ ಕಾರಣ, ಎತ್ತಿನ ಗಾಡಿಯಲ್ಲಿ ಸಾಗುತ್ತಿದ್ದಾಗ ದಾರಿ ಕಾಣದೇ ಮುಗುಚಿ ಬಿದ್ದಿದೆ. ಈ ಪರಿಣಾಮ ಮಕ್ಕಳಾದಂತ ಗಣೇಶ್ ಕಾಂಬಳೆ(9), ದೀಪಕ್ ಕಾಂಬಳೆ(11) ಎಂಬ ಬಾಲಕರು ಸಾವನ್ನಪ್ಪಿದ್ದಾರೆ.
ಹಳ್ಳದಲ್ಲಿ ದಾರಿ ಕಾಣದೇ ಈ ದುರಂತ ಸಂಭವಿಸಿದೆ. ಎತ್ತಿನ ಗಾಡಿ ಮುಗುಚಿ ಬಿದ್ದ ಪರಿಣಾಮ ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
JOB ALERT: ಶೀಘ್ರದಲ್ಲೇ ಪೊಲೀಸ್ ಇಲಾಖೆಯ 15,000 ಖಾಲಿ ಹುದ್ದೆಗಳು ಭರ್ತಿ: ಗೃಹ ಸಚಿವ ಜಿ.ಪರಮೇಶ್ವರ್
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ