ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅನುಷ್ಠಾನದ ದರಗಳನ್ನು ದುಬಾರಿಗೊಳಿಸಲಾಗಿದೆ ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದರು. ಇಂತಹ ಆರೋಪಗಳಿಗೆ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಈ ಕೆಳಕಂಡಂತೆ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಪುನರ್ ರಚಿಸಿದ ವಿತರಣಾ ಕ್ಷೇತ್ರ ಯೋಜನೆ (RDSS) ಅಡಿಯಲ್ಲಿ ಸ್ಮಾರ್ಟ್ ಮೀಟರ್‌ಗಳ ಅನುಷ್ಠಾನವನ್ನು ಪ್ರಾಮಾಣಿಕವಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೆತ್ತಿಕೊಂಡಿದೆ. ಇಂತಹ ಸಮಯದಲ್ಲಿ ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಅವರು ನೀಡಿರುವ ತಪ್ಪು ಮಾಹಿತಿಯಿಂದ ಕೂಡಿದ ಆರೋಪಗಳು ಜನರಲ್ಲಿ ಭ್ರಾಂತಿ ಮೂಡಿಸುವ ರಾಜಕೀಯ ಯತ್ನವೆಂಬುದು ಸ್ಪಷ್ಟವಾಗಿದೆ. ನವರಂಗಿ ನಾಯಕ ಅಶ್ವಥ್ ನಾರಾಯಣ್ ರವರು ವೈಯಕ್ತಿಕ ತೇಜೋವಧೆ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ಸಚಿವರಾದ ಜಾರ್ಜ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿರುತ್ತಾರೆ. ಸ್ಮಾರ್ಟ್ ಮೀಟರ್‌ಗಳ ಉದ್ದೇಶ ಇಂಧನ ಶಕ್ತಿಯಲ್ಲಿ ಪರಿಣಾಮಕಾರಿತ್ವ ಹೆಚ್ಚಿಸುವುದು, ನಷ್ಟ ಕಡಿಮೆ ಮಾಡುವುದು ಮತ್ತು ನಿರ್ಬಂಧರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವುದು ಆಗಿರುತ್ತದೆ. ಈ ಯೋಜನೆಯಲ್ಲಿ ಪ್ರತಿ ಮೀಟರ್‌ಗೆ ₹900 ರಷ್ಟು ಕೇಂದ್ರ ಸರ್ಕಾರ ಅನುದಾನ ಎಲ್ಲ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದಿದ್ದಾರೆ.
ಡಾ. ಅಶ್ವತ್ಥನಾರಾಯಣ ಅವರ ಆರೋಪಗಳು ಹಾಸ್ಯಾಸ್ಪದವಾಗಿದ್ದು, ಅವರು ಹೇಳುವಂತೆ ಇತರ ರಾಜ್ಯಗಳು ₹900 ಕ್ಕೆ ಮೀಟರ್‌ಗಳನ್ನು ಖರೀದಿಸುತ್ತಿಲ್ಲ. ಅದು ಅನುದಾನ ಮೊತ್ತವಲ್ಲದೇ ಪೂರ್ಣ ವೆಚ್ಚವಲ್ಲ ಎಂಬುದು ಗೊತ್ತಿದ್ದೂ ಗೊತ್ತಿಲ್ಲದ ಹಾಗೆಯೇ ಮಾತನಾಡಿದ್ದಾರೆ. ಅವರ 2020-21ರ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವೇ RDSS ಯೋಜನೆಯನ್ನು ನಿರಾಕರಿಸಿತ್ತು ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ನೀಡಿದ 2025 ಮೇ 19ರ ನಿರ್ದೇಶನದಂತೆ, ಸ್ಮಾರ್ಟ್ ಮೀಟರ್‌ಗಳನ್ನು ಹೊಸ ಸಂಪರ್ಕಗಳಿಗೆ ಮಾತ್ರ ಅಳವಡಿಸಲಾಗುತ್ತದೆ (IP ಸೆಟ್‌ಗಳನ್ನು ಹೊರತುಪಡಿಸಿ). ಈಗಿರುವ ಗ್ರಾಹಕರಿಗೆ ಇದು ಐಚ್ಛಿಕವಾಗಿದೆ ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ತಿರುವುಮರಳು ಮಾಡಿ, ಸಚಿವ ಶ್ರೀ ಕೆ.ಜೆ. ಜಾರ್ಜ್ ವಿರುದ್ಧ ವೈಯಕ್ತಿಕ ಹಾಗೂ ಸಮುದಾಯದ ಆಧಾರದ ಮೇಲೆ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳು ಅತ್ಯಂತ ಖಂಡನೀಯ. CHILUME ಮತದಾರ ಪಟ್ಟಿ ಹಗರಣ, HOMBALE ನಿರ್ಮಾಣದ ಗೊಂದಲಗಳು, BBMP ಟೆಂಡರ್ ಬೆಂಕಿ ಪ್ರಕರಣ, 108 ಆಂಬುಲೆನ್ಸ್ ಹಗರಣ ಇವೆಲ್ಲವೂ ಬಿಜೆಪಿಯ ನೈತಿಕ ಪತನಕ್ಕೆ ಸಾಕ್ಷಿಗಳಾಗಿವೆ. ಹಗರಣಗಳ ಜನಕರಾದ ಬಿಜೆಪಿ ನಾಯಕರು ಸುಳ್ಳು ಆರೋಪಗಳ ಮೇಲೆ ಸಾಮ್ರಾಜ್ಯ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.
ಡಾ. ಅಶ್ವತ್ಥನಾರಾಯಣ ಅವರದೇ ಬೇನಾಮಿ ಕಂಪನಿಗಳು ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ ಎಂಬ ಸಾರ್ವಜನಿಕ ಮಾತುಗಳು ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿವೆ. ಅವರು ಕೇಂದ್ರದ ಯೋಜನೆಗಳನ್ನು ಜಾರ್ಜ್ ರವರ ಕಾರಣಕ್ಕಾಗಿ ಟೀಕಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರಿಗೆ ಇವರ ಕಿವಿ ಹಿಂಡುವ ತಾಕತ್ತಿಲ್ಲ. ಇಂತಹ ವ್ಯಕ್ತಿಯು ಇಂಧನ ಇಲಾಖೆಯ ನಿರ್ಣಯಗಳ ವಿರುದ್ಧ ಮಾತನಾಡುತ್ತಿರುವುದು ದ್ವಂದ್ವಭಾವನೆ ಮತ್ತು ರಾಜಕೀಯ ಲಾಭಕ್ಕಾಗಿ ನಡೆದುಕೊಳ್ಳುವ ಧೋರಣೆಯದಾಗಿದೆ ಮತ್ತು ಇದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಖಂಡಿಸುವುದಾಗಿ ಹೇಳಿದ್ದಾರೆ.
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ