ಶಿವಮೊಗ್ಗ : ಜಿಲ್ಲೆಯ ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸೊರಬ ತಾಲ್ಲೂಕಿನ ಆಯಿಷಾ ಅವರು ತವರು ಮನೆ ಸಾಗರದ ಕಾರಣ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು.
ಇಂದು ಡಾ.ಪ್ರತಿಮಾ ಅವರು ಸಿಜೇರಿಯನ್ ಮೂಲಕ ಆಯಿಷಾಗೆ ಹೆರಿಗೆ ಮಾಡಿಸಿದ್ದಾರೆ. ಮೂವರು ಮಕ್ಕಳಿಗೆ ಆಯಿಷಾ ಜನ್ಮ ನೀಡಿದ್ದಾರೆ. ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳಿಗೆ ಸಾಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ, ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಆಯಿಷಾ ಅವರಿಗೆ ಎರಡನೇ ಹೆರಿಗೆ ಇದಾಗಿದ್ದು, ಮೊದಲ ಹೆರಿಗೆಯಲ್ಲಿ ಒಂದು ಮಗು ಜನಿಸಿತ್ತು.
ಈ ಹೆರಿಗೆ ವೇಳೆಯಲ್ಲಿ ಅನೇಸ್ತೇಶಿಯಾವನ್ನು ಡಾ.ಸಂಗಮ್ ನೀಡಿದರೇ ಟೆಕ್ನಿಷಿಯನ್ ರಾಕೇಶ್ ನೀಡಿ ನೆರವಾಗಿದ್ದಾರೆ. ಡಾ.ಪ್ರತಿಮಾ ಅವರಿಗೆ ಸಿಜೇರಿಯನ್ ವೇಳೆ ಶುಶ್ರೂಷಕಿಯರಾದಂತ ಅನಿತಾ ಮತ್ತು ಸುವರ್ಣ ಸಾಥ್ ನೀಡಿದ್ದಾರೆ. ಅಟೆಂಡರ್ ಚಂದ್ರು ಇದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು