ರಾಯಚೂರು : ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು, ಕೃಷಿ ಸಚಿವರಿದ್ದ ಹೆಲಿಕಾ್ಪಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ.
ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವಕ್ಕೆ ಹೋಗುವ ವೇಳೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬರುವಾಗ ಚಿತ್ರದುರ್ಗದಲ್ಲಿ ಇಂಧನ ಹಾಕಿಸಲಾಗಿತ್ತು. ಬಳಿಕ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಿಂದಾಲ್ ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ಬಳ್ಳಾರಿಯ ಜಿಂದಾಲ್ ನಿಂದ ಹೆಲಿಕಾಪ್ಟರ್ ಟೇಕ್ ಅಫ್ ಗೆ ಯತ್ನ. ಒಮ್ಮೆ ಟೇಕ್ ಆಫ್ ಆಗಿ ವಿಶೇಷ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.