ಬೆಂಗಳೂರು : ಮೇ.26 ರಿಂದ ರಾಜ್ಯದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಮತ್ತು ಇತರೆ ನೋಂದಣಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ.
ಹೌದು, ಇನ್ನು ಮುಂದೆ ಆಸ್ತಿ ನೋಂದಾಣಿಗೆ ಇ–ಸಹಿ ಕಡ್ಡಾಯವಾಗಿರಲಿದೆ.ಇಂದಿನಿಂದ ಆಸ್ತಿ ಅಥವಾ ಇತರ ನೋಂದಣಿ ಪ್ರಕ್ರಿಯೆಗಳಿಗೆ ವಿದ್ಯುನ್ಮಾನ ಸಹಿ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಬ್ಯಾಂಕ್ ಚಲನ್‌ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಬೇಕಾಗಿದೆ.
ಇನ್ನು ಮಂದೆ ಸ್ವತ್ತು ಮತ್ತು ಇತರ ನೋಂದಣಿಗಳಲ್ಲಿ ಡಿಜಿಟಲ್ ಸಹಿ, ಡಿಜಿಟಲ್ ಇ–ಸ್ಟಾಂಪ್ ಬಳಕೆ ಜಾರಿ ಕಡ್ಡಾಯವಾಗಲಿದೆ. ಈ ಹಿಂದಿನಂತೆ ಅಂಟಿಸುವ ಅಥವಾ ಮುದ್ರೆ ಹಾಕುವ ಸ್ಟಾಂಪ್‌ಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಇ–ಸ್ಟಾಂಪ್ ದುರುಪಯೋಗವನ್ನು ತಡೆಯಲು ಸ್ಟಾಂಪ್ ಮೊತ್ತವನ್ನು ವಿದ್ಯುನ್ಮಾನ ಪಾವತಿ ಮಾಡಬೇಕಿದೆ. ಸಿಬ್ಬಂದಿ ಮೂಲಕ (ಮ್ಯಾನ್ಯುವಲ್) ಸ್ಟಾಂಪ್ ವಿತರಿಸುವುದು ಸಂಪೂರ್ಣ ಸ್ಥಗಿತವಾಗಲಿದೆ.
ಸಿಬ್ಬಂದಿ ಮೂಲಕ ಸ್ಟಾಂಪ್ ವಿತರಣೆಗೆ ಸಂಪೂರ್ಣ ತಡೆ ಬೀಳಲಿದೆ. ಡಿಜಿಟಲ್ ಸಹಿ ದುರ್ಬಳಕೆಯಾಗದಂತೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್ ಸಹಿಯಲ್ಲಿ ಬಯೊಮೆಟ್ರಿಕ್ ಕೂಡ ಇರಲಿದೆ.