ಬೆಂಗಳೂರು : ರಾಜ್ಯದಲ್ಲಿ ಇದೀಗ ಕೊರೊನಾ ಆರ್ಭಟ ಮತ್ತೆ ಅಬ್ಬರಿಸುತ್ತಿದ್ದು, ಬೆಂಗಳೂರಿನಲ್ಲಿ ನಿನ್ನೆ ಕರೋನ ಸೊಂಕಿಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇದೀಗ ರಾಜ್ಯದಲ್ಲಿ ಒಟ್ಟು 40 ಕೊರೊನ ಪ್ರಕರಣಗಳು ಸಹಕ್ರಿಯವಾಗಿದ್ದು, ಕೊರೊನ ತಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಕಠಿಣ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊರೊನ ತಡೆಗೆ ಎಲ್ಲಾ ರೀತಿಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೊರೊನ ತಡೆಗೆ ಕಠಿಣ ಜಾರಿ ಮಾಡುವುದರ ಕುರಿತು ಸುಳಿವು ನೀಡಲಾಗಿದ್ದು, ಈ ಸಂಬಂಧ ಚರ್ಚೆ ಮಾಡಲಾಗಿದೆ. ಯಾವ ಕ್ರಮ ತೆಗೆದುಕೊಳ್ಳುವುದಕ್ಕೂ ಹಿಂದೆಟು ಬೇಡ ಏನೇನು ಕ್ರಮ ತೆಗೆದುಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೊರೊನ ತಡೆಗೆ ಎಲ್ಲ ರೀತಿಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿಸಿದರು.
ಅಲ್ಲದೇ ಬೆಂಗಳೂರಿನಲ್ಲಿ ನಿನ್ನೆ ಒಬ್ಬರು ಮೃತಪಟ್ಟಿದ್ದಾರೆ. ಕೊರೋನಗೆ 84 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ. ಒಂದು ವರ್ಷದಿಂದ ಆ ವ್ಯಕ್ತಿಗೆ ಅನಾರೋಗ್ಯದ ಸಮಸ್ಯೆ ಇತ್ತು. ವರದಿಯ ಸಂಬಂಧಿ ಕಾಯಿಲೆ ಮತ್ತು ಟಿಬಿ ಕಾಯಿಲೆ ಇತ್ತು. ಇದರ ಮಧ್ಯ ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.