ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು, ಇದೀಗ ಪೊಲೀಸ್ ಠಾಣೆಯ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಎಸ್ಐ ಒಬ್ಬರು ಬಲಿಯಾಗಿದ್ದಾರೆ.
ಹೌದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಎಸ್ಐ ವೀರೇಂದ್ರ (58) ಸಾವನಪ್ಪಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ಠಾಣೆಯ ಮೇಲ್ಚಾವಣಿ ಕುಸಿದು ದುರಂತ ಸಂಭವಿಸಿದೆ. ಅಲ್ಲದೇ ನಿನ್ನೆ ರಾತ್ರಿ ಸುರಿದ ಮಳೆಯಿಂದ ದೆಹಲಿ, ಎನ್ ಸಿ ಆರ್ ವ್ಯಾಪ್ತಿಯಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಮರಗಳು ಧರೆಗುಳಿದು ಬಿದಿದ್ದು, ತಗ್ಗು ಪ್ರದೇಶ ಮತ್ತು ರಸ್ತೆಗಳು ಜಲಾವೃತವಾಗಿವೆ.