ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು, ಮಲತಂದೆಯಿಂದಲೇ 3 ವರ್ಷದ ಬಾಲಕನ ಹತ್ಯೆ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಹಾರ್ ಮೂಲದ ನಾಲ್ವರು ಹಂತಕರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅರೆಸ್ಟ್ ಮಾಡಿದ್ದಾರೆ.
ಬಂಧಿತರು ಬಿಹಾರ್ ಮೂಲದವರು ಎಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೋಗೋಪ್ಪ ಹತ್ತಿ ಫ್ಯಾಕ್ಟರಿಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಕೆಲಸಕ್ಕೆ ಇದ್ದರು. ತನ್ನೊಟ್ಟಿಗೆ ಪುತ್ರ ಕಾರ್ತಿಕ್ ನನ್ನು ಮಹಿಳೆ ಕರೆದುಕೊಂಡು ಬಂದಿದ್ದಳು. ಮದ್ಯ ಸೇವಿಸಿ ಬಂದು ಪತ್ನಿಯ ಜೊತೆಗೆ ಮಹೇಶ್ವರ ಮಾಂಜಿ ಜಗಳವಾಡಿದ್ದ.ಮಹೇಶ್ವರ್ ಜೊತೆಗೆ ಮಹಿಳೆ 2ನೇ ಮದುವೆ ಆಗಿದ್ದಳು. ಹಾಗಾಗಿ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ಯ ಅಂತ ಜಗಳ ಮಾಡಿದ್ದ ಮಲತೊಂದೆ ಮಹೇಶ್ವರ ಮಾಂಜಿ ಸೇರಿದಂತೆ ನಾಲ್ವರಿಂದ ಹಲ್ಲೆಗೆ ಯತ್ನಿಸಲಾಗಿದೆ.
ಈ ವೇಳೆ 3 ವರ್ಷದ ಮಗನನ್ನು ತಾಯಿ ಬಿಟ್ಟು ಓಡಿ ಹೋಗಿದ್ದಾಳೆ. ಅಲ್ಲೇ ಇದ್ದ ಕಾರ್ತಿಕ್ ಮೇಲೆ ಪಾಪಿಗಳು ರಾಕ್ಷಸಿಯ ವರ್ತನೆ ತೋರಿದ್ದು ಕಟ್ಟಿಗೆಯಿಂದ ಹೊಡೆದು ಎಲ್ಲೆಂದರಲ್ಲಿ ಸುಟ್ಟು ಭೀಕರವಾಗಿ ಕೊಲೆ ಮಾಡಿದ್ದಾರೆ. ಕಾರ್ತಿಕ್ ಮುಕೇಶ್ ಮಾಂಜಿ (3) ಹತ್ಯೆಗೈದ ನಾಲ್ವರು ಆರೋಪಿಗಳು. ತಾಯಿ ವಾಪಸ್ ಮನೆಗೆ ಬಂದಾಗ ಮಗ ಕಾರ್ತಿಕ್ ಹತ್ಯೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಬಿಹಾರ್ ಮೂಲದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಘಟನೆ ಕುರಿತಂತೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.