ಬೆಂಗಳೂರು : ರಾಜ್ಯದಲ್ಲಿ ಇದೀಗ ಕೊರೊನಾ ಸೋಂಕು ಏರಿಕೆ ಆಗುತ್ತಿದ್ದು, ಈಗಾಗಲೇ ಇಂದಿನಿಂದಲೇ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೊರೋನ ಟೆಸ್ಟ್ ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಿನ್ನೆ ಸೋಂಕಿಗೆ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಇದೀಗ ಬೆಂಗಳೂರಿನಲ್ಲಿ ಮತ್ತೆ ಎರಡು ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಹೌದು ಬೆಂಗಳೂರಲ್ಲಿ ಮತ್ತೆ ಎರಡು ಕೊರೊನ ಪೊಸಿಟೀವ್ ಕೇಸ್ ಪತ್ತೆಯಾಗಿದ್ದು, ಮಲ್ಲೇಶ್ವರಂ ಮತ್ತು ರಾಜಾಜಿನಗರದಲ್ಲಿ ಇಬ್ಬರಿಗೆ ಕೊರೊನ ಪೋಸಿಟಿವ್ ವರದಿ ಬಂದಿದೆ. 38 ವರ್ಷದ ಯುವಕ ಮತ್ತು 45 ವರ್ಷದ ವ್ಯಕ್ತಿಗಳಿಗೆ ಇದೀಗ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಟ್ರಾವೆಲ್ ಹಿಸ್ಟರಿ ಇಲ್ಲದೆ ಇಬ್ಬರಿಗೂ ಇದೀಗ ಕೊರೊನಾ ಸೋಂಕು ಒಕ್ಕರಿಸಿದೆ.ಹಾಗಾಗಿ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಬಂದಿದ್ದು, ಇದೀಗ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.