ಬೆಂಗಳೂರು : ಅತ್ಯಾಚಾರದ ಪ್ರಕರಣದಲ್ಲಿ ಮಡೆನೂರು ಮನು ವಶಕ್ಕೆ ಪಡೆದ ಪ್ರಕರಣ ಸಂಬಂಧ ಈಗ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ವಿಷಯ ಗೊತ್ತಿದ್ದರೂ ಅತ್ಯಾಚಾರ ಸಂತ್ರಸ್ತರಿಗೆ ದೂರು ನೀಡದಂತೆ ತಡೆದಿದ್ದ ಕೆಲ ನಟ ನಟಿಯರನ್ನು ತನಿಖೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಹಾಗಾಗಿ ಕೆಲವು ಸಿನಿ ತಾರೆಯರಿಗೆ ಇದೀಗ ಭಯ ಶುರುವಾಗಿದೆ.
ಅತ್ಯಾಚಾರ ಆರೋಪ ಹೊತ್ತಿರುವ ಮಡೇನೂರು ಮನು ಹಾಗೂ ಸಂತ್ರಸ್ತೆಯ ಇಬ್ಬರ ನಡುವಿನ 31 ತಿಂಗಳ ವಾಟ್ಸಾಪ್ ಚಾಟ್ ಈಗ ಪೊಲೀಸರು ಪಡೆದುಕೊಂಡಿದ್ದಾರೆ. ಸಂತ್ರಸ್ತ ಹಾಗೂ ನಟ ಮನು ಮದ್ಯ ಸಾವಿರಾರು ಸಂದೇಶಗಳ ವಿನಿಮಯವಾಗಿದ್ದು, 2022ರ ನವೆಂಬರ್ ಇಂದ 2025 ಮೇ ವರೆಗಿನ ವಾಟ್ಸಾಪ್ ಚಾಟ್ ಇದೀಗ ಪೊಲೀಸರು ಪಡೆದುಕೊಂಡಿದ್ದಾರೆ. ಮದುವೆ ಹೆಸರಿನಲ್ಲಿ ಅತ್ಯಾಚಾರ ಎಸಗಿ ದೈಹಿಕ ಹಲ್ಲೆ ಮಾಡಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೇ ದೂರಿನಲ್ಲಿ ಉಲ್ಲೆಖಿಸಿದ್ದಾರೆ.
ನಟ ಮನುವನ್ನು ಕಸ್ಟಡಿಗೆ ಪಡೆದು ಇದೀಗ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಮನುಗೆ ಸೇರಿದ ಎರಡು ಮೊಬೈಲ್ ಹಾಗೂ ಸಂತ್ರಸ್ತೇ ಎರಡು ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.ಒಟ್ಟು ನಾಲ್ಕು ಮೊಬೈಲ್ ಗಳನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಸಂತ್ರಸ್ತೇ ಮತ್ತು ನಟನ ನಡುವಿನ ಆಡಿಯೋ ವಿಡಿಯೋ ಸಂಭಾಷಣೆಯಲ್ಲಿ. ಹಲವು ನಟ ನಟಿಯರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಸಿನಿ ತಾರೆಯರ ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೆಲ ಕಿರುತೆರೆ ನಟ ನಟಿಯರು ಸೇರಿದಂತೆ ಕೆಲ ಸಿನಿ ತಾರೆಯರ ಹೇಳಿಕೆ ದಾಖಲು ಮಾಡಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಸಂತ್ರಸ್ತೇ ದೂರು ನೀಡಲು ಮುಂದಾಗಿದ್ದಾಗ ಸೀನಿತಾರೆಯರು ತಡೆದಿದ್ದರು. ವಿಚಾರ ಗೊತ್ತಿದ್ದರೂ ದೂರು ನೀಡದಂತೆ ಸಿನಿ ತಾರಿಯರು ತಡೆದಿದ್ದರು. ಹೀಗಾಗಿ ಇದೀಗ ಸಿನಿತಾರೆಯರನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.