ಹಾವೇರಿ : ಕಳೆದ 2024 ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳು ಇತ್ತೀಚಿಗೆ ಜೈಲಿಂದ ಬಿಡುಗಡೆಯಾಗಿದ್ದರು. ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೆ ಆರೋಪಿಗಳು ರೋಡ್ ಶೋ ಮಾಡಿದ್ದಾರೆ. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ, ಪೊಲೀಸರು ಮತ್ತೆ 7 ಆರೋಪಿಗಳನ್ನು ಜೈಲಿಗೆ ಹಾಕಿದ್ದು, ಅವರ ವಿರುದ್ಧ ಇದೀಗ ರೌಡಿ ಶೀಟ್ ಓಪನ್ ಮಾಡಿದ್ದಾರೆ.
ಹೌದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಂದ ಮೆರವಣಿಗೆ ನಡೆಸಿದ ವಿಚಾರವಾಗಿ ಇದೀಗ ಪೊಲೀಸರು 7 ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯಲ್ಲಿ 7 ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಆಗಿದೆ. ಅತ್ಯಾಚಾರ ಆರೋಪಿಗಳು ಜಾಮೀನಿನ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಜಾಮೀನು ರದ್ದು ಪಡಿಸುವಂತೆ ಇದೀಗ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
BNS ಕಾಯ್ದೆ 189/2, 191/2, 281, 351/2, 351/3, 190ರಡಿ ಇದೀಗ ಪ್ರಕರಣ ದಾಖಲಾಗಿದೆ. ಕಾನೂನು ಬಾಹಿರವಾಗಿ ಗುಂಪು ಸೇರುವುದು, ಗಲಭೆಗೆ ಪ್ರಚೋದನೆ, ರ‍್ಯಾಷ್ ಡ್ರೈವಿಂಗ್, ಅಪರಾಧದ ಉದ್ದೇಶದಿಂದ ಗುಂಪು ಸೇರುವುದು ಸೇರಿದಂತೆ ಹಲವು ಆರೋಪಗಳ ಅಡಿ ಸೆಕ್ಷನ್ ದಾಖಲಿಸಿ ತನಿಖಾಧಿಕಾರಿಗಳು ಇದೀಗ ಬೇಲ್ ರದ್ದು ಪಡಿಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.