ಬೆಂಗಳೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಇಡೀ ಜಗತ್ತಿನಾದ್ಯಂತ ರಣಕೇಕೆ ಹಾಕಿದ್ದ ಕೋರೋನ ಮಹಾಮಾರಿ ಇದೀಗ ಮತ್ತೆ ಭಾರತಕ್ಕೆ ಒಕ್ಕರಿಸಿದೆ. ಅದರಲ್ಲೂ ಇದೀಗ ಕರ್ನಾಟಕದಲ್ಲಿ 35 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ ಹಾಗಾಗಿ ಆರೋಗ್ಯ ಇಲಾಖೆಯು ಶೀಘ್ರದಲ್ಲೇ ಕರೋನ ಕುರಿತಂತೆ ಎಚ್ಚರ ವಹಿಸಲು ಮಾರ್ಗಸೂಚಿ ಪ್ರಕಟವಾದ ಸಾಧ್ಯತೆ ಇದೆ.
ಹೌದು ಕೊರೋನಾ ಮಹಾಮಾರಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದು, ನಾಳೆಯಿಂದಲೇ ಕೋವಿಡ್ ಟೆಸ್ಟ್ ಆರಂಭವಾಗಲಿದೆ. ರಾಜ್ಯದ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ನಡೆಯಲಿದೆ. ಬೆಂಗಳೂರಿನಲ್ಲಿಯೇ ಹೆಚ್ಚು ಕೋವಿಡ್ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ಏಕೆಂದರೆ ಬೆಂಗಳೂರಿನಲ್ಲಿ 32 ಕೊರೋನ ಸಕ್ರಿಯ ಪ್ರಕರಣಗಳಿವೆ ಹಾಗಾಗಿ ಮುನ್ನೆಚ್ಚರಿಕೆ ಕ್ರಮ ಪಾಲನೆಗೆ ಆರೋಗ್ಯ ಇಲಾಖೆ, ಸೂಚನೆ ನೀಡಿದೆ.
ಮೆಡಿಕಲ್ ಕಾಲೇಜುಗಳಲ್ಲಿ, ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಇನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಸಿ.ವಿ ರಾಮನ್ ನಗರ ಆಸ್ಪತ್ರೆಯಲ್ಲಿ ಕೂಡ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಓಪನ್ ಗೆ ನಿರ್ಧರಿಸಲಾಗಿದ್ದು ನಾಳೆಯಿಂದಲೇ ರಾಜ್ಯದ ಒಟ್ಟು 8 ಮೆಡಿಕಲ್ ಕಾಲೇಜುಗಳಲ್ಲಿ ಆರಂಭವಾಗಲಿದೆ.