ಹೈದರಾಬಾದ್ : ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ಅನಂತಪುರ–ಅಮರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಥಟಿಚೆರ್ಲಾ ಮೋಟು ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತರೆಲ್ಲರೂ ಬಾಪಟ್ಲಾ ಜಿಲ್ಲೆಯ ಸ್ಟುವರ್ಟ್‌ಪುರಂ ಮೂಲದವರು.
ಸ್ಟುವರ್ಟ್‌ಪುರಂನ ಗಜ್ಜೇಲಾ ಭವಾನಿ (22) ಮತ್ತು ಅವರ ಮಗಳು ಸಿರಿಶಾ ಮತ್ತು ಮಗ ಸಿಧು, ಗಜ್ಜೆಲ ನರಸಿಂಹ (22), ಕರದ್ದುಲ ದಿವಾಕರ್ (26), ಗಜ್ಜೆಲ ಅಂಕಲು (45), ಬಚ್ಚು ಸಂದೀಪ್ (25), ಗಜ್ಜೆಲ ಬಬ್ಬುಲು ಅಲಿಯಾಸ್ ಜೋಸೆಫ್ (25) ಮೃತಪಟ್ಟವರು ಎಂದು ಗುರುತಿಸಲಾಗಿದೆ.