ತುಮಕೂರು : ಜಮೀನು ವಿಚಾರಕ್ಕೆ ಗಲಾಟೆ ನಡೆದು ಯುವಕನೊಬ್ಬ ಸ್ವಂತ ದೊಡ್ಡಪ್ಪನಿಗೆ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಲಕೊಪ್ಪದಲ್ಲಿ ಈ ಒಂದು ಬರ್ಬರ ಹತ್ಯೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕರೀಂ (50) ಎಂದು ತಿಳಿದುಬಂದಿದ್ದು, ಕರೀಂನನ್ನು ಕೊಲೆಗೈದು ತಮ್ಮನ ಮಗ ಆಫ್ರಿದ್ (25) ಪರಾರಿಯಾಗಿದ್ದಾನೆ. ಜಮೀನು ವಿಚಾರವಾಗಿ ಜಗಳ ನಡೆದು ಈ ಒಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ ವೆಂಕಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಒಂದು ಕೊಲೆಯು ಸಿಎಸ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.