ಬೆಂಗಳೂರು : ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಯುವತಿ ಸೇರಿದಂತೆ ಅಬಕಾರಿ ಅಧಿಕಾರಿಗಳು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಸಂಪತ್ ಪ್ರಧಾನ (23) ತಪಸ್ ಪ್ರಧಾನ್ (22) ಜಗನ್ ಪತಂಜಲಿ (24) ಹಾಗೂ ದೀಪಾಂಜಲಿ (22) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ರಾಜಾಜಿನಗರದ ಮೆಟ್ರೋ ಸ್ಟೇಷನ್ ಮಾರುತಿದ್ದರು. ದಾಳಿ ಮಾಡಿ ನಾಲ್ವರನ್ನು ಇದೀಗ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ NDPS ಆಕ್ಟ್ 1985 ಅಡಿ ಪ್ರಕರಣ ದಾಖಲಾಗಿದೆ.