ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲಿರುವ ವಿಶಾಖಪಟ್ಟಣಂನಲ್ಲಿರುವ ಉಕ್ಕಿನ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ವಿಶಾಖಪಟ್ಟಣಂ ನಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಇದುವರೆಗೂ ನಿಖರವಾದ ಕಾರಣ ಇನ್ನು ಗೊತ್ತಾಗಿಲ್ಲ.
ವಿಶಾಖಪಟ್ಟಣಂ ಉಕ್ಕು ಸ್ಥಾವರದಲ್ಲಿ, ವಿಶೇಷವಾಗಿ ಉಕ್ಕು ಕರಗುವ ಕೇಂದ್ರ -2 (SMS-2) ವಿಭಾಗದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆ ತಿಳಿದ ಬಳಿಕ ತಕ್ಷಣ ತುರ್ತು ಸೇವೆಗಳು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.