ಬೆಂಗಳೂರು: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯ ಸರ್ಕಾರದ 15ಸಾವಿರಕ್ಕೂ ಹೆಚ್ಚು ಆಯಕಟ್ಟಿನ ಹುದ್ದೆಗಳು ಖಾಲಿಯಿದ್ದು, 23 ಇಲಾಖೆಯ 15 ಸಾವಿರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಆಡಳಿತ ಸುಧಾರಣಾ ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂಟನೇ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಉಲ್ಲೇಖಿಸಿರುವ ದೇವಾಲಯಗಳಲ್ಲಿರುವ ಆಯೋಗ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಫಾರಸು ಮಾಡಿದೆ.
23 ಇಲಾಖೆಗಳಲ್ಲಿ ಒಟ್ಟು 21,442 ಹುದ್ದೆಗಳು ಮಂಜೂರಾಗಿದ್ದು, 15000 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಗಳ 1521 ಹುದ್ದೆ, ವೈದ್ಯಕೀಯ ಕಾಲೇಜ್ ಗಳ ಕಿರಿಯ ವೈದ್ಯರು 1080, ವೈದ್ಯಕೀಯ ಕಾಲೇಜ್ ನರ್ಸಿಂಗ್ ಅಧಿಕಾರಿಗಳು 1397, ಪಶು ಸಂಗೋಪನಾ ಇಲಾಖೆಯಲ್ಲಿ 1043 ವೈದ್ಯರು, ಕೃಷಿ ಇಲಾಖೆ ಎಎಒ ಹುದ್ದೆಗಳು 1870, ಕೃಷಿ ಅಧಿಕಾರಿ 732, ಸಹಕಾರ ಇಲಾಖೆಯಲ್ಲಿ 453 ಸೇರಿ ಒಟ್ಟು 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಶಿಫಾರಸು ಮಾಡಲಾಗಿದೆ ತಿಳಿಸಿದ್ದಾರೆ.