ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಬಳಿ ಮತ್ತೆ ಭದ್ರತಾ ಲೋಪ ಕಂಡು ಬಂದಿದೆ. ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಳಿ ಯುವಕನೊಬ್ಬ ಸಲ್ಮಾನ್ ಖಾನ್ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ.
ಹೌದು ಯುವಕನೊಬ್ಬ ಸಲ್ಮಾನ್ ಖಾನ್ ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ. ಮೇ 26 ಸಂಜೆ 7.15 ರ ಸಮಯದಲ್ಲಿ ಯುವಕ ಅಕ್ರಮವಾಗಿ ಮನೆ ಪ್ರವೇಶಿಸಲು ಯತ್ನಿಸಿದ್ದಾನೆ. 23 ವರ್ಷದ ಜಿತೇಂದ್ರ ಕುಮಾರ್ ಸಿಂಗ್ ನನ್ನು ಇದೀಗ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಭೇಟಿ ಮಾಡುವ ಉದ್ದೇಶದಿಂದ ಬಂದಿದ್ದೇನೆ ಎಂದು ಬಂಧಿತ ಜಿತೇಂದ್ರ ಕುಮಾರ್ ಸಿಂಗ್ ಈ ವೇಳೆ ಹೇಳಿದ್ದಾನೆ. ಸಲ್ಮಾನ್ ಖಾನ್ ಮನೆ ಆವರಣದಲ್ಲಿ ಇದೀಗ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.