ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಗಣತಿ ವರದಿಯು ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಲಾಯಿತು.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಜಾತಿಗಣತಿ ವಿಚಾರವನ್ನು ಪ್ರಸ್ತಾಪಿಸಲಾಯಿತು. ಈ ವೇಳೆ ಕೆಲವು ಸಚಿವರ ಅಭಿಪ್ರಾಯ ಸಂಗ್ರಹಿಸಿದ ಕುರಿತಂತೆ ಮತ್ತೆ ಈ ವಿಷಯವನ್ನು ಮುಂದೂಡಲಾಯಿತು.
ಹೌದು ಇಂದು ನಡೆದ ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವಿಚಾರ ನಿರ್ಧಾರವಾಗಿಲ್ಲ. ಜಾತಿಗಣತಿ ಜಾರಿ ವಿಷಯವನ್ನು ಇದೀಗ ಸಂಪುಟ ಸಭೆ ಮತ್ತೆ ಮುಂದೂಡಿದೆ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಚಿವರ ಅಭಿಪ್ರಾಯ ಮಂಡನೆ ಬಳಿಕ ಜಾತಿಗಣತಿ ಜಾರಿ ವಿಷಯ ಮುಂದೂಡಿಕೆ ಮಾಡಲಾಯಿತು.







