ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು 2025ನೇ ಸಾಲಿನಿಂದ ಪಿಜಿ ಡಿಪಿಹೆಚ್ಎಂ ಸ್ನಾತಕೋತ್ತರ ವ್ಯಾಸಂಗ ಮಾಡುವುದಕ್ಕೆ ತಡೆ ನೀಡಿ ಆದೇಶಿಸಿದೆ. ಈ ಮೂಲಕ PGDPHM ವ್ಯಾಸಂಗದ ನಿರೀಕ್ಷೆಯಲ್ಲಿದ್ದಂತ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಆಯುಕ್ತರು, ಆರೋಗ್ಯ, ಮತ್ತು ಕುಟುಂಬ ಕಲ್ಯಾಣ ಸೇವಗಳು ಇವರು 2011-12 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು PHFI (Public Health Foundation Of India) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಅದರನ್ವಯ ಇಲಾಖೆಯ ಎಂ.ಬಿ.ಬಿ.ಎಸ್ ವೈದ್ಯರು, ದಂತ ವೈದ್ಯರು, ಮತ್ತು ಶುಶೂಷಕರುಗಳನ್ನು Post Graduation Diploma in Public Health Management (PGDPHM) ವ್ಯಾಸಂಗಕ್ಕೆ ನಿಯೋಜಿಸಲಾಗುತ್ತಿತ್ತು ಎಂದಿದ್ದಾರೆ.
ಸದರಿ ವ್ಯಾಸಂಗವು 2012-13ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದು, 2024ನೇ ಸಾಲಿನವರೆಗೂ, ಒಟ್ಟು 229 ಅಭ್ಯರ್ಥಿಗಳು ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿರುತ್ತಾರೆ. ಹೀಗೆ ವ್ಯಾಸಂಗವನ್ನು ಪೂರೈಸಿ ಹಿಂದಿರುಗಿದ ವೈದ್ಯರುಗಳಿಗೆ ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ತರಬೇತಿ ಪ್ರಾಂಶುಪಾಲರು, ಮತ್ತು ಉಪ ನಿರ್ದೇಶಕರು ಹುದ್ದೆಗಳನ್ನು ನೀಡಬಹುದಾಗಿದೆ. ಅದರಂತೆ, special officer & Director, Indian Institute of Public Health ಇವರು ಸರ್ಕಾರಿ ಸಂಕ್ರಾಮಿಕ ರೋಗಗಳ ಆಸ್ಪತ್ರೆ ಆವರಣ, ಇಂದಿರಾನಗರ, ಬೆಂಗಳೂರು ಇಲ್ಲಿ ಪ್ರತಿ ವರ್ಷದಂತ 2024-25ನೇ ಸಾಲಿನಲ್ಲಿ ನಡೆಯಲಿರುವ ಒಂದು ವರ್ಷದ Post Graduation Diploma in Public Health Management (PGDPHM) ವ್ಯಾಸಂಗಕ್ಕೆ ವೈದ್ಯರು ಮತ್ತು ಶುಶೂಷಕರುಗಳನ್ನು ನಿಯೋಜಿಸುವಂತೆ ಕೋರಿರುತ್ತಾರೆ ಎಂದು ಹೇಳಿದ್ದಾರೆ.
ಆದರೆ ಪಿ.ಜಿ.ಡಿ.ಪಿ.ಹಚ್.ಎಂ. ಪದವಿಯು ಸ್ನಾತಕೋತ್ತರ ಡಿಪ್ಲೋಮ ಪದವಿಯಾಗಿದ್ದು, ಸದರಿ ಪದವಿಯನ್ನು Post Graduation ಎಂದು ಪರಿಗಣಿಸಲು ಈ ಕೋರ್ಸ್ ಯಾವುದೇ ವಿಶ್ವವಿದ್ಯಾಲಯ (University)ದಲ್ಲಿ ಮಾನ್ಯತೆಯನ್ನು ಪಡೆದಿರುವುದಿಲ್ಲ. ಸದರಿ ಪದವಿಯನ್ನು KMC (Karnataka Medical Council) ಯಲ್ಲಿ PGDPHM ಸ್ನಾತಕೊತ್ತರ ಪದವಿಯನ್ನು Not Recognised ಎಂದು ಪರಿಗಣಿಸಿದ್ದು, ಯಾವುದೇ ರೀತಿಯ Registration ಪ್ರಕ್ರಿಯೆಯನ್ನು ಕೈಗೊಳ್ಳದ ಕಾರಣ KMC ವತಿಯಿಂದ ಪ್ರಮಾಣ ಪತ್ರವನ್ನು ನೀಡುತ್ತಿರುವುದಿಲ್ಲ. ಆದ್ದರಿಂದ 2025ನೇ ಸಾಲಿಗೆ ಪಿಜಿಡಿಪಿಹಚ್‌ಎಂ ವ್ಯಾಸಂಗಕ್ಕೆ ಇಲಾಖೆಯ ಅಭ್ಯರ್ಥಿಗಳ ನಿಯೋಜನೆಯನ್ನು ತಡೆಹಿಡಿಯುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಎಂದು ಹೇಳಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪಿಜಿಡಿಪಿಹೆಚ್‌ಎಂ (Post Graduation Diploma in Public Health Managemerit) ವ್ಯಾಸಂಗಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಭ್ಯರ್ಥಿಗಳ ನಿಯೋಜನೆಯನ್ನು 2025ನೇ ಸಾಲಿಗೆ ತಡೆಹಿಡಿದು ಆದೇಶಿಸಿದ್ದಾರೆ.
ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್ ಡಿ 02 ಎಸ್ ಆರ್ 08, ದಿನಾಂಕ:05/06/2008 ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದ ಮೇರೆಗೆ ಹೊರಡಿಸಿದ್ದಾರೆ.