ಬೆಂಗಳೂರು : ಬೆಂಗಳೂರಿನಲ್ಲಿ ಇದೀಗ ಭಾರಿ ಮಳೆಯಿಂದ ಜನತೆ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಭಾರಿ ಮಳೆಯಿಂದ ರಸ್ತೆಯೆಲ್ಲ ಸಂಪೂರ್ಣವಾಗಿ ಜಲಾವೃತವಾಗಿವೆ. ಇದೀಗ ಬೆಂಗಳೂರಿನ ಓಕಳಿಪುರಂನಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಬೃಹ ಗಾತ್ರದ ಮರ ಒಂದು ಮನೆಯ ಮೇಲೆ ಉರುಳಿ ಬಿದ್ದಿದೆ.
ಹೌದು ಬೆಂಗಳೂರಿನ ಬಳಿ ಬೃಹತ್ಕಾರದ ಮರ ಒಂದು ಮನೆಯ ಮೇಲೆ ಬಿದ್ದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಆರ್‌ಸಿಸಿ ಮನೆಯ ಗೋಡೆಗೆ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಮೂವರು ಸದಸ್ಯರು ಮರ ಬಿದ್ದಿದ ತಕ್ಷಣ ಕೂಡಲೇ ಹೊರಗೆ ಓಡಿಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.