ಪಪುವಾ ನ್ಯೂಗಿನಿಯಾದ ಅಂಗೋರಾಮ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದೆ.
2025-05-20 ರಂದು 15:05:59 GMT (ಭಾರತೀಯ ಸಮಯ ಸಂಜೆ 8:35) ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಸುದ್ದಿ ಸಂಸ್ಥೆ ಕ್ಸಿನ್ಹುವಾವನ್ನು ಉಲ್ಲೇಖಿಸಿ ವರದಿ ಮಾಡಿದೆ.
USGS ಪ್ರಕಾರ, ಭೂಕಂಪದ ಕೇಂದ್ರಬಿಂದು ಅಂಗೋರಾಮ್‌ನಿಂದ ಈಶಾನ್ಯಕ್ಕೆ 111 ಕಿಲೋಮೀಟರ್ ದೂರದಲ್ಲಿ, 3.50 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 144.90 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು.
ಇದರ ಆಳ 53 ಕಿಲೋಮೀಟರ್ ಎಂದು ದಾಖಲಾಗಿದೆ. ಈ ಪ್ರದೇಶವು ‘ರಿಂಗ್ ಆಫ್ ಫೈರ್’ ನ ಭಾಗವಾಗಿದ್ದು, ಅಲ್ಲಿ ಭೂಕಂಪನ ಚಟುವಟಿಕೆ ಸಾಮಾನ್ಯವಾಗಿದೆ. ಪ್ರಾಥಮಿಕ ವರದಿಗಳು ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಸೂಚಿಸುತ್ತವೆ.