ಮಂಗಳೂರು : ಮಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇದೀಗ ಮಂಗಳೂರಿನ ಬಜೆಪಯ ಆದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಮಂಗಳೂರು ಏರ್ಪೋರ್ಟ್ ಭಾಗದಿಂದ ಮಣ್ಣು ಮತ್ತು ನೀರು ಹರಿದು ಬಂದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಹೌದು ಮಳೆಯಿಂದ ಬಜಪೆ ಬಳಿ ಆದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದ್ದು, ಮಂಗಳೂರು ವಿಮಾನ ನಿಲ್ದಾಣ ಕೆಳಭಾಗದ ಆದ್ಯಪಾಡಿಯಲಿ ಏರ್ಪೋರ್ಟ್ ಭಾಗದಿಂದ ಮಣ್ಣು ಮತ್ತು ನೀರು ಹರಿದು ಬಂದಿದೆ. ಯಾವ ಪ್ರಮಾಣದಲ್ಲಿ ನೀರು ಮಣ್ಣು ಹರಿದು ಬಂದಿದೆ ಎಂದರೆ, ಉಮಾನಾಥ ಸಾಲ್ಯಾನ್ ಎಂಬುವವರ ಮನೆ ಆವರಣ ಸಂಪೂರ್ಣವಾಗಿ ಕೆಸರಿನಲ್ಲಿ ಮುಳುಗಿದೆ. ಮನೆಯ ಮುಂದಿನ ಅಂಗಳದಲ್ಲಿ ಸಂಪೂರ್ಣವಾಗಿ ಕೆಸರು ತುಂಬಿಕೊಂಡಿದೆ.
ಈ ಕುರಿತು ಮನೆಯ ಮಾಲೀಕ ಉಮಾನಾಥ ಅವರು ಪ್ರತಿಕ್ರಿಯೆ ನೀಡಿ, ಇತರ ಮಣ್ಣು ನೀರು ಬರುವುದು ಮೊದಲೇನಲ್ಲ, ಕಳೆದ ವರ್ಷದಲ್ಲಿ ಕೂಡ ಇದೇ ರೀತಿ ಮಣ್ಣು ನೀರು ಬಂದು ಸಮಸ್ಯೆ ಉಂಟಾಗಿತ್ತು. ಏರ್ಪೋರ್ಟ್ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದರು ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಬಂದಾಗಲೂ ನಮಗೆ ಈ ರೀತಿ ಸಮಸ್ಯೆ ಬರಲ್ಲ ಆದರೆ ಏರ್ಪೋರ್ಟ್ ನಿಂದ ನೀರು ಬಿಟ್ಟರೆ ನಮಗೆ ಮನೆ ಮುಂದೆ ಎಲ್ಲ ಕೆಸರು ತುಂಬಿಕೊಳ್ಳುತ್ತದೆ ಎಂದು ತಿಳಿಸಿದರು.